ಚಿಕ್ಕೋಡಿ ತಾಲೂಕಿನ ಹೊಸ ಇಂಗಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಚಿಕ್ಕೋಡಿ ತಾಲೂಕಿನ ಹೊಸ ಇಂಗಳಿ ಗ್ರಾಮದಲ್ಲಿ ರಾಜಮಾತಾ ಜಿಜಾವು ಮಹಿಳಾ ಮಂಡಳ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ತರುಣ ಮಂಡಳದ ಇವರ ಸಂಯುಕ್ತ ಆಶ್ರಯದಲ್ಲಿ ಛತ್ರಿಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಈ ಒಂದು ಸ್ಪರ್ಧೆಯಲ್ಲಿ 12 ಸ್ಪರ್ಧಿಗಳು ಭಾಗವಹಿಸಿದ್ದರು. ಈ ರಂಗೋಲಿ ಸ್ಪರ್ಧೆಯಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಗಳು ರಂಗೋಲಿಯಲ್ಲಿ ಕಂಗೊಳಿಸಿದವು.ಸ್ಪರ್ಧಾಳುಗಳು ಅತ್ಯಂತ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು.ಈ ಸ್ಪರ್ಧೆಯಲ್ಲಿ ಪ್ರಿಯಾಂಕ ಬಾಮನೆ ಪ್ರಥಮ ಸ್ಥಾನ,ಸುಭಾಷ ಶಿಂಧೆ ದ್ವೀತಿಯ ಸ್ಥಾನ, ಸೋನಾಲಿ ಚಿಗರೆ ಹಾಗೂ ಸವಿತಾ ಕುಡಚೆಯವರು ತೃತೀಯ ಸ್ಥಾನವನ್ನು ಪಡೆದುಕೊಂಡರು..ವಿಜೇತರಿಗೆ ನಗದು ರೂಪದಲ್ಲಿ ಬಹುಮಾನವನ್ನು ನೀಡಿ ಗೌರವಿಸಲಾಯಿತು.ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಫರ್ಧಾಳುಗಳಿಗೆ ಸಮಾಧನಕರ ಬಹುಮಾನವಾಗಿ ಸನ್ಮಾನ ಚಿಹ್ನೆಯನ್ನು ನೀಡಲಾಯಿತು.ನಿರ್ಣಾಯಕರಾಗಿ ಎಂ.ಡಿ.ಜಾಧವ ಹಾಗೂ ಸಂಭಾಜಿ ಘೋಸರವಾಡೆ ಅವರು ಕಾರ್ಯನಿರ್ವಹಿಸಿದರು…ಇದೇ ಸಂಧರ್ಭದಲ್ಲಿ ಎಂ.ಡಿ.ಜಾಧವ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿರುವುದು ಸ್ವಾಗತಾರ್ಹ ಎಂದರು.
