ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿರುವ ಯುವ ನಾಯಕ ರಾಹುಲ್ ಜಾರಕಿಹೊಳಿ ಇತ್ತೀಚೆಗೆ ಪ್ರಾಣಿ-ಪಕ್ಷಿ ಸಂಕುಲಗಳ ನೀರಿನ ದಾಹ ನೀಗಿಸಲು ಸತೀಶ ಜಾರಕಿಹೊಳಿ ಫೌಂಡೇಶನದಿಂದ ಯಮಕನಮರಡಿ ಹಾಗೂ ಗೋಕಾಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ಪಶು-ಪಕ್ಷಿಗಳಿಗಾಗಿ ಕಾಳು ಮತ್ತು ನೀರಿನ ಅರವಟ್ಟಿಗೆ ಅಳವಡಿಸಿ ಗ್ರಾಮಸ್ಥರ ಮೆಚ್ಚುಗೆ ಪಾತ್ರರಾಗಿದ್ದರು.

ಈಗ ಈ ಫೌಂಡೇಶನ್ ಜಾನುವಾರುಗಳಿಗೆ ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಸಿರುವ ಎರಡನೇ ಕಾರ್ಯವಾಗಿದ್ದು ಸಧ್ಯ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.
ವಾ.ಓ: ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಗೋಕಾಕ ಹಾಗೂ ಯಮಕನಮರಡಿ ಕ್ಷೇತ್ರದಲ್ಲಿ ಅಳವಡಿಸಿದ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಸತೀಶ ಜಾರಕಿಹೊಳಿ ಇಂದು ಬೇಸಿಗೆಯಲ್ಲಿ ಪ್ರಾಣಿ ಹಾಗೂ ಜಾನುವಾರುಗಳು ಕುಡಿಯಲು ನೀರಿಲ್ಲದೇ ಪರದಾಡುತ್ತಿವೆ. ಇಂಥ ಸಂದರ್ಭದಲ್ಲಿ ಜಾನುವಾರಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯುವ ಜನರು ಇಂತಹ ಕಾರ್ಯ ಮಾಡಲು ಪಣ ತೊಡಬೇಕು. ಅಲ್ಲದೇ ಇಂತಹ ಕಾರ್ಯ ಎಲ್ಲಡೇ ಮಾದರಿಯಾಗಬೇಕು ಎಂದರು.
ಈ ವೇಳೆ ಜುಬೇರ್ ಮಿರ್ಜಾಭಾಯಿ, ರಾಜು ಮುಲ್ಲಾ, ಪ್ರವೀಣ ಕಳ್ಳಿಮನಿ, ಅಲಿ ನದಾಫ್, ಅರುಣ ಪ್ರೇಮಕುಮಾರ, ಸಾಮ್ರಾಜ್ಯ ಭಜಂತ್ರಿ, ಸತೀಶ್ ಕೊಳಕಿ, ಜುನೇದ್ ಮಿರ್ಜಾಭಾಯಿ, ಪಾಂಡು ಮನ್ನೀಕೇರಿ, ಶಿವು ಪಾಟೀಲ, ರಿಯಾಜ್ ಚೌಗಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
