ವಿಜಯಪುರ ನಗರದಲ್ಲಿ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕ್ಷುಲ್ಲಕ ಕಾರಣಗಳಿಗೂ ಇಲ್ಲಿ ಕೊಲೆಯಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಹಣಕಾಸಿನ ಕಾರಣಕ್ಕೆ ಜೀವವೊಂದು ನೆಲಕಲ್ಕುರುಳಿದೆ. ಜೊತೆಗಿದ್ದವರೇ ಗೆಳೆಯನನ್ನಾ ಖತಂ ಮಾಡಿದ್ದಾರೆ. ತಡರಾತ್ರಿ ನಡೆದ ಮರ್ಡರ್ ವಿಜಯಪುರ ನಗರವನ್ನು ಬೆಚ್ಚಿ ಬೀಳಿಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…

ಹೌದು ಮನೆಗೆ ಆಸರೆಯಾಗಿದ್ದ ಮಗನನ್ನಾ ಕಳೆದುಕೊಂಡು ಕುಟುಂಬ ದಿಕ್ಕೆಟ್ಟು ಕುಳಿತಿದೆ. ವಿಜಯಪುರ ನಗರದ ಬಬಲೇಶ್ವರ ನಾಕಾ ಬಳಿಯ ಕಟ್ಟಿಗೆ ಅಡ್ಡೆ ಮಾಲೀಕ ಮಹ್ಮದ್ ಅಥಣಿ (34) ಎಂಬಾತನ್ನು ತಡರಾತ್ರೀ ಕೊಲೆ ಮಾಡಲಾಗಿದೆ. ಮಹ್ಮದ್ ನೊಂದಿಗೆ ಬಾರ್ ವೊಂದರಲ್ಲಿ ಪಾರ್ಟಿ ಮಾಡಿ ಬಂದಿದ್ದ ಆರು ಗೆಳೆಯರ ಬಳಗ ಪರಸ್ಪರ ಜಗಳ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಮಹ್ಮದ್ ಮೇಲೆ ಇತರೆ ಐವರು ಗೆಳೆಯರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೈಗೆ ಸಿಕ್ಕ ಕಲ್ಲುಗಳನ್ನು ಎತ್ತಿ ಮಹ್ಮದ್ ತಲೆ ಮೇಲೆ ಹಾಕಿದ್ದಾರೆ. ಪರಿಣಾಮ ಮಹ್ಮದ್ ಅಥಣಿ ಸ್ಥಳದಲ್ಲಿಯೇ ಉಸಿರು ಬಿಟ್ಟಿದ್ದಾನೆ. ಇದೆಲ್ಲಾ ಪಕ್ಕದಲ್ಲಿಯೇ ಇದ್ದ ಗೋದಾವರಿ ಹೊಟೇಲ್ ನಲ್ಲಿದ್ದ ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಗಾಂಧಿಚೌಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹ್ಮದ್ ಜೊತೆಗಿದ್ದು ಆತನನನ್ನು ಕೊಲೆ ಮಾಡಿದ ಕಿರಾತಕರಿಗೆ ಬಲೆ ಬೀಸಿದ್ದಾರೆ. ಕದೀಮರ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದಾರೆ…
ಕಳೆದ 16 ನೇ ಫೆಬ್ರುವರಿ ಮಧ್ಯರಾತ್ರಿ 12-15ಕ್ಕೆ ನಗರದ ರಹೀಂ ನಗರದ ಮನೆಯಿಂದ ಮಹ್ಮದ್ ಹೊರಗಡೆ ಹೋಗಿದ್ದನಂತೆ. ಮನೆಯಿಂದ ಹೊರ ಬಂದಿದ್ದ ಮಹ್ಮದ್ ಅಥಣಿ ವಾಪಸ್ ಮನೆಗೆ ಹೋಗಿರಲಿಲ್ಲ. ಮನೆಯಲ್ಲಿ ಮಹ್ಮದ್ ಅಥಣಿ ಪತ್ನಿ ಮಕ್ಕಳು ಹಾಗೂ ತಂದೆ ತಾಯಿ ಸಹೋದರರು ತಡರಾತ್ರಿವರೆಗೂ ಮಹ್ಮದ್ ಗಾಗಿ ಕಾಯ್ದಿದ್ದಾರೆ. ಎಷ್ಟು ಹೊತ್ತಾದರೂ ಮನೆಗೆ ಬಾರದ ಕಾರಣ ಯಾವುದೋ ಕೆಲಸದ ನಿಮಿತ್ಯ ಹೊರ ಹೋಗಿರಬಹುದು ಎಂದು ಸುಮ್ಮನಾಗಿದ್ದರಂತೆ. ಆದರೆ ಬೆಳಿಗ್ಗೆ ಮನೆಗೆ ಪೊಲೀಸರು ಬಂದ ಮೇಲೆಯೇ ಎಲ್ಲರಿಗೂ ಮಹ್ಮದ್ ಕೊಲೆಯಾದ ವಿಷಯ ತಿಳಿದಿದೆ. ಮನೆಯಿಂದ ಹೊರ ಹೋದವ ಯಾರ ಜೊತೆಗೆ ಹೋದ. ಆತನನ್ನಾ ಯಾರು ಕೊಲೆ ಮಾಡಿದರು ಎಂಬಿತ್ಯಾದಿ ವಿಚಾರಗಳು ನಮಗೆ ಗೊತ್ತಿಲ್ಲ. ಪೊಲೀಸರಿಗೆ ದೂರು ನೀಡಿದ್ದೇವೆ. ನಮ್ಮ ಮನೆ ಮಗನನ್ನ ಕೊಲೆ ಮಾಡಿದವರನ್ನಾ ಪೊಲೀಸರು ಬಂಧಿಸಲು ಒತ್ತಾಯ ಮಾಡಿದ್ದಾರೆ…
: ಸದ್ಯ ಕೊಲೆಗೀಡಾಗಿರೋ ಮಹ್ಮದ್ ಜೊತೆಗಿದ್ದವರು ಯಾರು ಎಂಬುದು ಇನ್ನೂ ಪ್ರಶ್ನಾರ್ಹವಾಗಿದೆ. ಯಾರ ಜೊತೆಗೆ ತಡರಾತ್ರಿವರೆಗೂ ಮಹ್ಮದ್ ಪಾರ್ಟಿ ಮಾಡಿದ್ದು, ಅವರವರ ಮಧ್ಯೆ ಜಗಳವಾಗಿದ್ದಾದರೂ ಯಾಕೆ? ಹಣಕಾಸಿನ ವ್ಯವಹಾರ ಇತ್ತು ಎಂಬ ಮಾತುಗಳು ಕೇಳಿ ಬಂದಿವೆ. ಪೊಲೀಸರ ತನಿಖೆ ಬಳಿಕ ಕೊಲೆಗೆ ನಿಖರ ಕಾರಣ ಸಿಗಲಿದೆ. ಇನ್ನೂ ತಡರಾತ್ರೀ ನಡೆದ ಕೊಲೆಯಿಂದಾಗಿ ಗುಮ್ಮಟ ನಗರಿ ಜನತೆ ಬೆಚ್ಚಿ ಬಿದ್ದಿದ್ದಾರೆ. ಪೋಲಿಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಕ್ರೈಂ ತಡೆಗಟ್ಟಬೇಕು ಎಂದು ಜಿಲ್ಲೆಯ ಜನತೆ ಒತ್ತಾಯ ಮಾಡುತ್ತಿದ್ದಾರೆ…
ವಿಜಯಕುಮಾರ ಸಾರವಾಡ
ಇನ್ ನ್ಯೂಜ್,
ವಿಜಯಪುರ…