ಉಡುಪಿ ಹಾಗೂ ಕುಂದಾಪುರ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಪ್ರವೇಶಿಸಲು ವಿದ್ಯಾರ್ಥಿಗಳಿಗೆ ನಿರಾಕರಿಸಿದ್ದು ಖಂಡನೀಯ, ಈ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಪ್ರವೇಶಿಸಲು ಆನುಮತಿ ನೀಡಬೇಕು ಇಲ್ಲವಾದರೆ ಹುಬ್ಬಳ್ಳಿಯಿಂದ ಉಡುಪಿಗೆ ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮುಸ್ಲಿಂ ಮುಖಂಡರು ತಹಶಿಲ್ದಾರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಮಾಡಿದರು.
ಹಿಜಾಬ್ ಹಾಕಿ ಕಾಲೇಜಿಗೆ ಪ್ರವೇಶಿಸಲು ನಿರ್ಬಂಧ ಹೇರಿರುವುದು ಕಾಲೇಜಿನ ಆಡಳಿತ ಮಂಡಳಿ ಹಾಗೂ ಕರ್ನಾಟಕ ಸರಕಾರದ ನಡುವಳಿಕೆ ಇಸ್ಲಾಂ ಧರ್ಮದ ವಿರುದ್ಧವಾಗಿದೆ ಎಂದರು.
ಪದೇ ನಮ್ಮ ಮೇಲೆ ಆರೋಪಗಳು ಮತ್ತು ದೌರ್ಜನ್ಯ ನಡೆಯುತ್ತಿದ್ದು, ಬೇಸರ ತಂದಿದೆ.
ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಹಕ್ಕಾಗಿದೆ. ಅದನ್ನು ಪ್ರಶ್ನಿಸುವ ಯಾರಿಗಿಲ್ಲ. ಹಿಜಾಬ್ ಎಂಬುದು ಹೆಣ್ಣುಮಕ್ಕಳ ಆಭರಣ, ಇದು ನಮ್ಮ ಮೂಲಭೂತ ಹಕ್ಕಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು
.ನಾವು ಭಾರತದ ಪ್ರಜೆಯಾಗಿದ್ದು, ಇಲ್ಲಿಯೇ ಇರುತ್ತೇವೆ ಪಾಕಿಸ್ತಾನಕ್ಕೆ ಹೋಗುದಿಲ್ಲ. ಭಾರತದ ಮೇಲೆ ನಮಗೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದೇವೆ ಹಾಗೂ ಭಾರ ಮೇಲೆ ನಮಗೆ ಅಪಾರ ಗೌರವ, ವಿಶ್ವಾಶವಿದೆ ಎಂದು ತಿಳಿಸಿದರು.
ಇದನ್ನು ನೋಡಿದರೆ ಭೇಟಿ ಬಡಾವೋ ಭೇಟಿ ಬಚಾವೋ ಎಂಬುದು ಸುಳ್ಳು ಮುಸ್ಲಿಂ ಹೆಣ್ಣುಮಕ್ಕಳು ಶಾಲಾ-ಕಾಲೇಜಿಗೆ ಹಿಜಾಬ್ ಧರಿಸಿಯೇ ಬರುತ್ತಾರೆ ಇದನ್ನು ನಾವೂ ತೊರೆಯುವುದಿಲ್ಲ ಎಂದರು.
ಉಡುಪಿ ಹಾಗೂ ಕುಂದಾಪುರ ಕಾಲೇಜಿನಲ್ಲಿ ಸೇರಿಸಿ ವಿದ್ಯಾರ್ಥಿಗಳಿಗೆ
೩ ದಿನದಲ್ಲಿ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ದೇಶಾದ್ಯಂತ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]
ಪ್ರತಿಭಟನಾ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಲ್ತಾಪ್ ಹಳ್ಳೂರ, ಆಸ್ಪಾಕ ಕುಮಟಾಕರ್, ಮೌಲಾನಾ ನಯಿಮುದ್ದಿನ ಶೇಖ, ಮೌಲಾನಾ ನಿಜಾಮುದ್ದಿನ್ ಚಡನ್, ಮೌಲಾನಾ ಅಬ್ದುಲ್ ರಹಮಾನ್, ಮೌಲಾನಾ ಹುಸ್ಮಾನ್ ಗನಿ ಮಜರ್ ಖಾನ್, ಅಲ್ತಾಫ್ ಹಳ್ಳೂರ, ಜರೀನ್ ತಾಜ್ ಆಫಜ್, ಫರಜಾನ್ ಒಂಟಿ, ಶಹಜಾನ್ ಬ್ಯಾಹಟ್ಟಿ, ಶಾಹಿನ್ ಶಿರಹಟ್ಟಿ ಸೇರಿದಂತೆ ಮುಂತಾದವರು ಇದ್ದರು.