Kagawad

ಐನಾಪುರದಲ್ಲಿ ಇತ್ತೀಚೆಗೆ ಅಗಲಿದ ಚೇತನರಿಗೆ ಶ್ರದ್ದಾಂಜಲಿ ಕಾರ್ಯಕ್ರಮ

Share

ಇತ್ತೀಚಿಗೆ ನಮ್ಮನ್ನಗಲಿದ ಸಮಾಜದ ಗಣ್ಯರಾದ ಕರುನಾಡುರತ್ನ ಪುನೀತ್ ರಾಜಕುಮಾರ, ಭಾರತ ರತ್ನ ಕೋಗಿಲೆ ಕಂಠದ ಗಾಯಕಿ ಲತಾ ಮಂಗೇಶ್ಕರ್, ಭಾರತದ ಸೇನಾ ರತ್ನ ಬಿಪಿನ್ ರಾವತ್, ಪ್ರವಚನ ಪಟು ಇಬ್ರಾಹಿಂ ಸುತಾರ ಹಾಗೂ ಖ್ಯಾತ ಕವಿ ಚನ್ನವೀರ ಕಣವಿಯವರ ಅಗಲಿಕೆಯಿಂದ ಕರ್ನಾಟಕ ಹಾಗೂ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದ್ದು, ಕಾವವಾಡದ ಐನಾಪುರದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗುರುವಾರ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಸಂಜೆ ಸಂಗೀತ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಗಲಿದ ಸಮಾಜದ ಗಣ್ಯರಾದ ಪವರ್ ಸ್ಟಾರ್, ಪುನೀತ್ ರಾಜಕುಮಾರ, ಭಾರತ ರತ್ನ ಕೋಗಿಲೆ ಕಂಠದ ಗಾಯಕಿ ಲತಾ ಮಂಗೇಶ್ಕರ್, ಭಾರತದ ಸೇನಾ ರತ್ನ ಬಿಪಿನ್ ರಾವತ್, ಪ್ರವಚನ ಪಟು ಇಬ್ರಾಹಿಂ ಸುತಾರ ಹಾಗೂ ಖ್ಯಾತ ಕವಿ ಚನ್ನವೀರ ಕಣವಿಯವರಿಗೆ ಮೇನದ ಬತ್ತಿ ಬೆಳಗಿಸಿ, ನಾಲ್ವರು ಗಣ್ಯರ ಭಾವಚಿತ್ರಗಳಿಗೆ ಹೂ ಮಾಲೆ ಹೂಮಾಲೆ ಹಾಕುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಪ್ರೇರಣಾ ಫೌಂಡೇಶನದ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ಸಂಜಯ ಬೀರಡಿ, ಈ ಮಹಾನ್ ನಾಯಕರ ಅಗಲಿಕೆಯಿಂದ ಕರ್ನಾಟಕ ಹಾಗೂ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರಿಗೆ ಚಿರಶಾಂತಿ ಕರುಣೀಸಲಿ. ಅವರ ಕುಟುಂಬಕ್ಕೆ ಹಾಗೂ ನಾಡಿನ ಜನತೆಗೆ ಈ ದುಖ:ವನ್ನು ಭರಿಸುವ ಶಕ್ತಿ ಕರುಣಿಸಲಿ. ನಾನು ಐನಾಪುರ ಪ್ರೇರಣಾ ಫೌಂಡೇಶನ ವತಿಯಿಂದ ಸಂಗೀತದ ಮೂಲಕ ಶ್ರದ್ದಾಂಜಲಿ ಅರ್ಪಿಸುತ್ತೇವೆ ಎಂದರು.

ಇದೇ ವೇಳೆ ಮಾತನಾಡಿದ ವಿಜಯ ಹುದ್ದಾರ, ಸಾವಿನಲ್ಲೂ ಸಾರ್ಥಕತೆ ಮೆರೆದ ಮೇಧಾವಿಗಳು ಅಂತರಾಷ್ಟ್ರೀಯ ಖ್ಯಾತಿ ಪಡೆದ ಲತಾ ಮಂಗೇಶ್ಕರ ಅವರು 22 ಭಾμÉಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ನಮ್ಮಲ್ಲರನ್ನು ಅಗಲಿದ್ದಾರೆ. ಅದೇ ರೀತಿ ಪುನೀತ ರಾಜಕುಮಾರ, ಬಿಪಿನ್ ರಾವತ್, ಇಬ್ರಾಹಿಂ ಸುತಾರ, ಚನ್ನವೀರ ಕಣವಿಯವರು ಮತ್ತೊಮ್ಮೆ ಈ ಕರುನಾಡಿಲ್ಲಿ ಈ ಭಾರತ ದೇಶದಲ್ಲಿ ಹುಟ್ಟಿ ಬರಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.

ಈ ವೇಳೆ ಖ್ಯಾತ ಗಾಯಕರಾದ ವಿಜಯ ಹುದ್ದಾರ, ಗುರುಪಾದ ಮುದನ್ನವರ, ರಾಜಶ್ರೀ ಹಿಟ್ಟಕ್ಕಿ ಹಾಗೂ ಸಂಗೀತ ಬಳಗ ಸಂಗೀತ ಶ್ರದ್ದಾಂಜಲಿ ಅರ್ಪಸಿದರು. ರಾಜ್ಯ ಇಂಜನೀಯರುಗಳ ಸಂಘದ ಮಾಜಿ ಉಪಾಧ್ಯಕ್ಷ ಅರುಣಕುಮಾರ ಯಲಗುದ್ರಿ, ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ, ಪಟ್ಟಣ ಪಂಚಾಯತ್ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಕುಚನೂರೆ, ಪ್ರೇರಣಾ ಫೌಂಡೇಶನದ ಯಶವಂತ ಪಾಟೀಲ, ಸತೀಶ ಗಾಣಿಗೇರ, ಪ್ರವೀಣ ಕುಲಕರ್ಣಿ, ಮೋಹನ ಗಾಣಿಗೇರ, ಮಹೇಶ ನಡುವಿನಮನಿ, ಪ್ರಕಾಶ ಸತ್ತಿ, ರವಿ ಬಸ್ತವಾಡ. ರಾಖೇಶ ಕಾರ್ಚಿ, ಸುಮಂತ ಕಟ್ಟಿ, ಪ್ರಕಾಶ ಚಿನಗಿ, ಶೈಲು ಕೋಳಿ, ದಿಲಿಪ ನಿಕ್ಕಮ, ಸಂತೋಷ ಪಾಟೀಲ, ಗಜುಕುಮಾರ ಪಾಟೀಲ. ಪ್ರೇಮ ಉಗಾರೆ, ಸೇರಿದಂತೆ ಅನೇಕರು ಇದ್ದರು.

 

Tags:

error: Content is protected !!