ರಾಜ್ಯದಲ್ಲಿರುವ ಎಲ್ಲ ಮದರಸಾ ಮತ್ತು ಉರ್ದು ಶಾಲೆಗಳನ್ನು ಬಂದ್ ಮಾಡಬೇಕು. ಕಲಿಯುವುದಾದರೆ ಕನ್ನಡ ಕಲಿಯಲಿ, ಭಾರತದ ಸಂಸ್ಕøತಿಯನ್ನು ಒಪ್ಪಿಕೊಂಡು ಜೀವಿಸಲಿ. ಅದಕ್ಕೆ ತಯಾರಿಲ್ಲ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹರಿಹಾಯ್ದಿದ್ದಾರೆ.

ಸಧ್ಯ ರಾಜ್ಯದಲ್ಲಿ ಹಿಜಾಬ್ ವರ್ಸಸ್ ಕೇಸರಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಪರ-ವಿರೋಧ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮೈಸೂರಿನಲ್ಲಿ ಖಾರವಾಗಿ ಪ್ರತಿಕ್ರಯಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಉರ್ದು ಬೇಕು, ಹಿಜಾಬ್ ಬೇಕು, ಇಸ್ಲಾಂ ಧರ್ಮದ ಸಂಸ್ಕøತಿ ಪಾಲಿಸಬೇಕು ಎಂದಾದರೆ ಅದಕ್ಕೆ ಪಾಕಿಸ್ತಾನವನ್ನು ಕೊಟ್ಟಿದ್ದೇವೆ. ಇಲ್ಲಿಯೇ ಇರಬೇಕಾದರೆ ದೇಶದ ಸಂವಿಧಾನ ಮತ್ತು ಸಂಸ್ಕøತಿಯನ್ನು ಪಾಲಿಸಬೇಕು. ಹಿಜಾಬ್ ಧರಿಸಿಕೊಂಡು ಬರುವವರನ್ನು ಶಾಲೆಯಿಂದ ಹೊರಗೆ ಹಾಕಬೇಕು ಎಂದು ಒತ್ತಾಯಿಸಿದರು.
ಮುಂದುವರಿದು ಮಾತನಾಡಿದ ಯತ್ನಾಳ್ ಇಂದು ಹಿಜಾಬ್ ಧರಿಸಲು ಅವಕಾಶ ನೀಡಿ ಎನ್ನುವವರು, ನಾಳೆ ಶಾಲೆಯಲ್ಲಿ ಮಸೀದಿ ಕಟ್ಟಬೇಕು ಎನ್ನುತ್ತಾರೆ. ಅಂತವರಿಗೆ ಬೆಂಬಲ ಕೊಡುವವರು ನಿಜವಾದ ದೇಶದ್ರೋಹಿಗಳು. ಇಂತಹ ಚಟುವಟಿಕೆಗಳನ್ನು ಯಾವುದೇ ಮುಲಾಜಿಲ್ಲದೆ ಹತ್ತಿಕ್ಕಬೇಕು. ರಾಜ್ಯದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ದೇಶವಿರೋಧಿ ಶಕ್ತಿಗಳ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಸಿದ್ದರಾಮಯ್ಯ ಅವರು ಹಿಂದೂ ಆಗಿಯೇ ಇದ್ದಾರೆಯೇ ಅಥವಾ ಇಸ್ಲಾಂಗೆ ಮತಾಂತರಗೊಂಡಿದ್ದಾರೆಯೇ ಎಂಬ ಅನುಮಾನ ನನಗೆ ಕಾಡುತ್ತಿದೆ. ಪ್ರತಿಬಾರಿಯೂ ಮುಸ್ಲಿಮರ ಪರವಾಗಿ ಮಾತನಾಡುವುದು ಜಾತ್ಯಾತೀತರ ಲಕ್ಷಣವಲ್ಲ. ಜಾತ್ಯಾತೀತ ಎಂದರೆ ಎಲ್ಲ ಸಮಾಜದ ಭಾವನೆಗಳನ್ನು ಅರಿತುಕೊಂಡು ಕೆಲಸ ಮಾಡಬೇಕು. ಒಂದು ವರ್ಗವನ್ನು ಮೆಚ್ಚಿಸಿಕೊಂಡು ಕುಳಿತರೆ ದೇಶದ ಪರಿಸ್ಥಿತಿ ಏನಾಗಬೇಡ..? ತಾಲಿಬಾನಿ ಸಂಸ್ಕøತಿಯನ್ನು ತರುವ ಷಡ್ಯಂತ್ರಕ್ಕೆ ನಮ್ಮ ಪಕ್ಷ ಅವಕಾಶ ಕೊಡುವುದಿಲ್ಲ ಎಂದು ಯತ್ನಾಳ್ ಕಿಡಿಕಾರಿದರು.
ಒಟ್ಟಿನಲ್ಲಿ ಹಿಜಾಬ್ ಬೇಕು ಎನ್ನುವವರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗಲಿ ಎಂದು ಯತ್ನಾಳ್ ನೀಡಿರುವ ಹೇಳಿಕೆ ಸಧ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.