ಇಂಗಳಿ ಪಿಕೆಪಿಎಸ್ ಅಧ್ಯಕ್ಷರಾಗಿ ಅಜೀತ ಚಿಗರೆ, ಉಪಾಧ್ಯಕ್ಷರಾಗಿ ಮಾರುತಿ ಪವಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಡಾ.ಅಜಿತ ಚಿಗರೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಾರುತಿ ಪವಾರ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚಿಕ್ಕೋಡಿಯ ಸಹಕಾರಿ ಇಲಾಖೆಯ ಅಧಿಕಾರಿಗಳಾದ ಸತೀಶ ಮುಚಂಡಿ ಇವರು ಘೋಷಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅಜಿತ್ ಚಿಗರೆ ಮಾತನಾಡಿ ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲ ನಿರ್ದೇಶಕ ಮಂಡಳಿಯ ಹಾಗೂ ಸದಸ್ಯರ ಸಹಕಾರದಿಂದ ಸಂಸ್ಥೆಯ ಪ್ರಗತಿಗಾಗಿ ಶ್ರಮಿಸುತ್ತೇನೆ. ರಾಜ್ಯ ಸರ್ಕಾರ ನೀಡುತ್ತಿರುವ ಎಲ್ಲ ಯೋಜನೆಗಳನ್ನು ಸಂಘದ ಮುಖಾಂತರ ಸದಸ್ಯರಿಗೆ ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಅವರು ಹೇಳಿದರು.
ನಂತರ ಉಪಾಧ್ಯಕ್ಷ ಮಾರುತಿ ಪವಾರ ಮಾತನಾಡಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಆಡಳಿತ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಭೀಮು ಸಂಗಮೆ, ರಾಜಾರಾಮ ಮಾನೆ, ಸುನೀಲ ಪಾಟೋಳೆ, ಹೂವಣ್ಣ ಚೌಗುಲೆ, ಸುಭಾಷ ಘೋಸರವಾಡೆ, ಬಿಬಾತಾಯಿ ಶಿಂಧೆ, ಬಸಪ್ಪ ಕಾಂಬಳೆ, ಧೋಂಡಿಬಾ ಪವಾರ, ಚಂದ್ರಕಾಂತ ಲಂಗೋಟೆ, ಸುಭಾಷ ಉನ್ಮಾಳೆ, ಸುಭಾಸ ಜುಗಳೆ, ಅಣ್ಣಾಸಾಬ ದಿಗ್ರಜೆ, ಬಾಜಿರಾವ್ ಮಾನೆ, ಮೋಹನ್ ಪಾಟೊಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.