Belagavi

ಮೊಬೈಲ್ ಬಿಡಿ, ಪುಸ್ತಕ ಹಿಡಿ: ರವಿ ಭಜಂತ್ರಿ

Share

ಬೆಳಗಾವಿ, ಮೇ 24: “ಮೊಬೈಲ್‌ಗಳನ್ನು ಬಿಟ್ಟು ಪುಸ್ತಕಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳಿ. ಈ ವಯಸ್ಸಿನಲ್ಲಿ ಉತ್ತಮ ಆಹಾರ, ಸಮರ್ಪಕ ನಿದ್ರೆ ಮತ್ತು ಓದಿನತ್ತ ಗಮನ ಹರಿಸುವುದು ಅತ್ಯಗತ್ಯ. ವಿಶೇಷವಾಗಿ ಬೆಳಗಿನ ಓದು ಮನಸ್ಸಿನಲ್ಲಿ ಗಾಢವಾಗಿ ಉಳಿಯುತ್ತದೆ. ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ಜ್ಞಾನ ಅಗತ್ಯ,” ಎಂದು ಬೆಳಗಾವಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ ಹೇಳಿದರು.

ಅವರು ಬೆಳಗಾವಿಯ ವಚನಪಿತಾಮಹ ಡಾ. ಪ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ಮಹಾಂತೇಶನಗರ ವತಿಯಿಂದ 2026–27ನೇ ಸಾಲಿನ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಗುರು ಬಸವ ಜ್ಞಾನ ಕೇಂದ್ರ ನಡೆದು ಬಂದ ದಾರಿಯ ಕುರಿತು ಶಶಿಭೂಷಣ ಪಾಟೀಲ ಮಾಹಿತಿ ನೀಡಿದರು. ಪ್ರಸಾದ ಹಿರೇಮಠ ಮಾತನಾಡಿ, “ಇಲ್ಲಿ ಉಚಿತವಾಗಿ ಪೆನ್ನು, ನೋಟ್‌ಬುಕ್, ಬ್ಯಾಗ್ ಹಾಗೂ ಅಭ್ಯಾಸ ಸೌಲಭ್ಯಗಳನ್ನು ಪಡೆದುಕೊಂಡಿದ್ದೀರಿ. ಹತ್ತನೇ ತರಗತಿಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಬೇಕು,” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಲಾವಣ್ಯಾ ಅಂಗಡಿ ವಚನ ಗಾಯನ ಮಾಡಿದರು. ಪ್ರಕಾಶ ಗಿರಿಮಲ್ಲಣ್ಣವರು ಶರಣರ ಕುರಿತು ಮಾತನಾಡಿದರು. ವಿ.ಕೆ. ಪಾಟೀಲ ದಾಸೋಹ ಸೇವೆಗೈದರು. ಕಾರ್ಯಕ್ರಮವನ್ನು ಸಂಗಮೇಶ ಅರಳಿ ನಿರೂಪಿಸಿದರು. ಸಾಮೂಹಿಕ ಪ್ರಾರ್ಥನೆಯನ್ನು ಮಹಾದೇವಿ ಅರಳಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಲಷ್ಮಿಕಾoತ ಗುರವ, ಶೇಖರ ವಾಲಿಇಟಗಿ, ಶoಕ್ರಣ್ಣ ಮೆಣಸಗಿ, ಸುದೀರ ರಘಶೆಟ್ಟಿ, ಶಿವಪುತ್ರಯ್ಯ ಪೂಜಾರ,ಎಂ ವೈ ಮೆಣಸಿನಕಾಯಿ,ಆನoದ ಕರಕಿ, ಶಿವಕುಮಾರ ಪಾಟೀಲ, ಮಹದೇವ ಕೆoಪಿಗೌಡರ, ಬಸವರಾಜ ಬಿಜ್ಜರಗಿ,ವಿದ್ಯಾ ಕರಕಿ,ಅಕ್ಕಮಹಾದೇವಿ ತೆಗ್ಗಿ, ಸುವಣ೯ ಗುಡಸ,ನೇತ್ರಾ ಕೆoಪಣ್ಣ ರಾಮಾಪೂರಿ ದoಪತಿಗಳು, ಮ. ಬಿ.ಕರಿಕಟ್ಟಿ, ಸದಾಶಿವ ದೇವರಮನಿ,ಶಂಕರ ಗುಡಸ, ಶಾoತಾ ಕoಬಿ, ಶಿವಾನಂದ ನಾಯಕ, ವಿರುಪಾಕ್ಷಿ ದೂಡ್ಡಮನಿ, ಗುರುಸಿದ್ದಪ್ಪ ರೇವಣ್ಣವರ ಸೇರಿದಂತೆ ಅನೇಕ ಶರಣ–ಶರಣೆಯರು ಉಪಸ್ಥಿತರಿದ್ದರು, ಸುರೇಶ ನರಗುoದ ವoದಿಸಿದರು.

Tags:

error: Content is protected !!