ಈ ಸಮವಸ್ತ್ರದಲ್ಲಿ ಭಿನ್ನಾಭಿಪ್ರಯದ ತಲೆನೋವು ಇತ್ತೀಚೆಗೆ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಕರಾವಳಿಯಲ್ಲಿನ ಹಿಜಾಬ್ ಕ್ರಮರಣ ಇನ್ನೂ ಬಗೆಹರಿಯದ ಬೆನ್ನಲ್ಲೇ ಈಗ ರಾಜ್ಯದಲ್ಲಿ ಮತ್ತೊಂದು ಸಮವಸ್ತ್ರದ ವಿವಾದ ತಲೆದೋರಿದೆ.

ರಾಜ್ಯದ ಅಂಗನವಾಡಿಗಳಲ್ಲಿ ಕೆಲಸ ಮಾಡ್ತಿರುವ ಶಿಕ್ಷಕಿಯರು ಹಾಗೂ ಸಹಾಯಕಿಯರಿಗೂ ಸರಕಾರ ಡ್ರೇಸ್ ಕೋಡ್ ಜಾರಿ ಮಾಡಿದೆ. ಸರಕಾರ ನೀಡಿರುವ ಸೀರೆಗಳ ಮೇಲೆ ಸರಕಾರಿ ಯೋಜನೆಯೊಂದರ ಜಾಹಿರಾತು ಇರುವ ಸೀರೆಗಳನ್ನು ನೀಡಲಾಗಿದೆ. ಇದರಿಂದಾಗಿ ಚಿಕ್ಕಬಳ್ಳಾಪುರ ಅಂಗನವಾಡಿ ನೌಕರರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಅಂಗನವಾಡಿಗಳಲ್ಲಿ ಕೆಲಸ ಮಾಡ್ತಿರುವ ಶಿಕ್ಷಕಿಯರು ಹಾಗೂ ಸಹಾಯಕಿಯರು ಸರ್ಕಾರ ನೀಡಿರುವ ಸೀರೆಯನ್ನು ಧರಸಿ ಕೆಲಸ ಮಾಡಬೇಕಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸೀರೆಗಳನ್ನು ವಿತರಣೆ ಮಾಡಿದೆ. ಆದರೆ ಸೀರೆಯ ಮೇಲೆ ಸರಕಾರಿ ಯೋಜನೆಯೊಂದರ ಜಾಹಿರಾತು ಇದೆ. ಹಾಗಾಗಿ ಅಂಗನವಾಡಿಗಳ ಶಿಕ್ಷಕಿಯರು ಹಾಗೂ ಸಹಾಯಕಿಯರು, ಸರ್ಕಾರದ ಡ್ರೇಸ್ ಕೋಡ್ ಜಾರಿಗೆ ವಿರೋಧ ವ್ಯಕ್ತಪಡಿಸಿಲ್ಲವಾದ್ರೂ ಸೀರೆಯ ಮೇಲೆ ಜಾಹಿರಾತು ಮುದ್ರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿ ನೌಕರರು ಸರ್ಕಾರದ ಸೀರೆಯನ್ನು ಬಹಿಷ್ಕರಿಸಿ ಸೀರೆಗಳನ್ನು ಸ್ವೀಕರಿಸದ ಕಾರಣ ರಾಜ್ಯಾದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸೀರೆಗಳು, ಆಯಾ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯಲ್ಲೆ ಕೊಳೆಯುತ್ತಿವೆ. ಇದರಿಂದ ಗೊಂದಲಕ್ಕೆ ಸಿಲುಕಿರುವ ಇಲಾಖೆಯ ಅಧಿಕಾರಿಗಳು, ಸರ್ಕಾರಕ್ಕೆ ಪತ್ರ ಬರೆದು ಮಾರ್ಗದರ್ಶನ ನೀಡಲು ಕೋರಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಸಮಾನತೆ ತರಲು ಮುಂದಾಗಿರುವ ಸರ್ಕಾರ, ಅಂಗನವಾಡಿಗಳಲ್ಲೂ ಸಮಾನತೆ ಜಾರಿಗೊಳಿಸಿ ಸೀರೆ ವಿತರಿಸಿದೆ ಆದ್ರೆ ಸೀರೆಗಳ ಮೇಲೆ ಇಲಾಖೆಯ ಯೋಜನೆಯ ಜಾಹಿರಾತು ಪ್ರಕಟ ಮಾಡಿದ್ದಕ್ಕೆ ಅಂಗನವಾಡಿ ನೌಕರರು ಗರಂ ಆಗಿದ್ದು, ನಾವೇನ್ ಸರ್ಕಾರ ಜಾಹಿರಾತು ಪ್ರದರ್ಶನ ಮಾಡುವ ವಸ್ತುಗಳೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.