ಬೆಳಗಾವಿಯ ಪ್ರತಿಷ್ಠಿತ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಮುಖ್ಯ ಶಾಖೆಯ ನೂತನ ಅಧ್ಯಕ್ಷರಾಗಿ ಸರಳಾ ಹೇರೆಕರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಹಿರಿಯರು ಹಾಗೂ ಸಿಬ್ಬಂದಿ ವರ್ಗದವರಿಂದ ನೂತನ ಅಧ್ಯಕ್ಷರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಬೆಳಗಾವಿಯ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಮುಖ್ಯ ಶಾಖೆಯ ಅಧ್ಯಕ್ಷರಾಗಿ ಸರಳಾ ಹೇರೆಕರ ಅವರು ನೂತನವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ಬೆಳಗಾವಿ ಮಹಾತ್ಮಾ ಬಸವೇಶ್ವರ ಸೌಹಾರ್ದ ಸೊಸೈಟಿಯ ಖಡೇ ಬಝಾರ್ ಶಾಖೆಯ ಅಧ್ಯಕ್ಷರಾದ ಬಸವರಾಜ್ ಹೇರೆಕರ ಅವರು ಅವರಿಗೆ ಶಾಲು ಹೊದಿಸಿ,

ಶ್ರೀಫಲ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿ ಶುಭ ಹಾರೈಸಿದರು. ಇದೇ ವೇಳೆ ಬ್ಯಾಂಕಿನ ಸಿಬ್ಬಂದಿ ವರ್ಗದವರು ಕೂಡ ನೂತನ ಅಧ್ಯಕ್ಷರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಈ ಆತ್ಮೀ ಯ ಸನ್ಮಾನ ಸಮಾರಂಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ವಿವೇಕ್ ಹೇರೆಕರ,

ಮೀನಾಕ್ಷಿ, ಸುಜಾತಾ ಹೇರೆಕರ, ಚನ್ನಪ್ಪ ಮಾಳಗೆ ಹಾಗೂ ಭಾಗ್ಯಶ್ರೀ ಸೇರಿದಂತೆ ಸಂಸ್ಥೆಯ ಮುಖ್ಯಸ್ಥರು, ಹಿರಿಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಬೆಂಬಲ ಸೂಚಿಸಿದರು.
