ಈ ಜಿಲ್ಲೆ ಪ್ರತಿ ವರ್ಷ ಕೂಡಾ ಬರಗಾಲಕ್ಕೆ ತುತ್ತಾಗುತ್ತದೆ, ಒಂದೆಡೆ ಅತೀವೃಷ್ಠಿಯಿಂದ ರೈತರು ಸಂಕಷ್ಟಕ್ಕೆ ಈಡಾದರೆ ಇನ್ನೊಂದೆಡೆ ಅನಾವೃಷ್ಠಿಯಿಂದ ಸಂಕಷ್ಟ ಅನುಭವಿಸುತ್ತಾರೆ. ಆದರೆ ಜಿಲ್ಲೆಯ ರೈತರಿಗೆ ಮಾತ್ರ ಸರ್ಕಾರದಿಂದ ಸೂಕ್ತ ಪರಿಹಾರ ಬರಲ್ಲ, ಈ ಹಿನ್ನಲೆಯಲ್ಲಿ ಜಿಲ್ಲೆಯನ್ನು ಶಾಶ್ವತ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ವಿಜ್ಯುಲ್ಸ್ ಪ್ಲೋ…
ವೈ…ಓ… ಹೌದು ವಿಜಯಪುರ ಜಿಲ್ಲೆಯ ರೈತರು ಪ್ರತಿ ವರ್ಷ ಕೂಡಾ ಬರಗಾಳ್ಕೆ ತುತ್ತಾಗುತ್ತಾರೆ ಒಂದೆಡೆ ಅತೀವೃಷ್ಠಿಯಿಂದ ರೈತರ ಬೆಳೆಗಳು ಹಾಳಾದರೆ ಇನ್ನೊಮ್ಮೆ ಅನಾವೃಷ್ಠಿಯಿಂದ ಹಾಳಾಗುತ್ತವೆ ಒಟ್ಟಾರೆ ಪ್ರತಿ ವರ್ಷ ಬರಗಾಲಕ್ಕೆ ಜಿಲ್ಲೆಯ ರೈತರು ತುತ್ತಾದರೂ ಸಹಿತ ಶಾಶ್ವತ ಬರ ಪೀಡಿತ ಜಿಲ್ಲೆ ಎಂದು ವಿಜಯಪುರ ಜಿಲ್ಲೆಯನ್ನು ಘೋಷಣೆ ಮಾಡಿಲ್ಲ ಹೀಗಾಗಿ ಶಾಶ್ವತ ಬರ ಪೀಡಿತ ಜಿಲ್ಲೆ ಎಂದು ವಿಜಯಪುರ ಜಿಲ್ಲೆಯನ್ನು ಘೋಷಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇನ್ನೂ ರಾಜ್ಯದ ಕೆಲ ಜಿಲ್ಲೆ ಅತೀವೃಷ್ಠಿಯಿಂದ ಬೆಳೆಹಾನಿಯಾದ ರೈತರಿಗೆ ಪರಿಹಾರವೂ ಬಂದಿದೆ ಜೊತೆಗೆ ಆ ಜಿಲ್ಲೆಗಳನ್ನು ಬರ ಪೀಡಿತ ಜಿಲ್ಲೆ ಎಂದು ಸಹಿತ ಸರ್ಕಾರ ಘೋಷಿಸಿದೆ ಹಾಗೆಯೇ ಶ್ವಾಶ್ವತ ಬರಗಾಲಕ್ಕೆ ತುತ್ತಾಗುವ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಗೆ ಮನವಿ ಸಲ್ಲಿಸಿದ್ದಾರೆ…
ಬೈಟ್ : ವಿಠಲ್ ಬಿರಾದಾರ್, ಪ್ರಗತಿ ಪರ ರೈತ…
ವೈ…ಓ.. : ಲೇಜಿ ಕ್ರಾಪ್ ಎಂತಲೇ ಗುರುತಿಸಿಕೊಂಡಿರುವ ತೊಗರೆಯನ್ನು ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಆದರೆ ಸರಿಯಾದ ಸಮಯಕ್ಕೆ ಮಳೆ ಬರದೇ ಇರುವ ಕಾರಣ ಇಂದು ತೊಗರಿ ಹಾಳಾಗಿ ಹೋಗಿ ರೈತನು ತಲೆಯ ಮೇಲೆ ಕೈ ಹೊತ್ತು ಕುಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಶೇಕಡಾ 70% ತೋಗರಿ ಹಾಳಾಗಿ ಹೋಗಿದೆ ಈ ಹಿನ್ನಲೆಯಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಮಳೆಯ ಪ್ರಮಾಣ ಭಾರೀ ಕಡಿಮೆಯಾದ ಹಿನ್ನಲೆಯಲ್ಲಿ ಭೂಮಿಗೆ ಹಸಿ ಪ್ರಮಾಣ ಕಡಿಮೆಯಾಗಿದೆ ಇದರಿಂದಾಗಿ ರೈತರು ಬೆಳೆದ ತೊಗರಿ ಹಾಳಾಗಿ ಹೋಗಿದೆ…
ಬೈಟ್ : ಅರವಿಂದ ಕುಲಕರ್ಣಿ, ಅಖಂಡ ಕರ್ನಾಟಕ ರೈತ ಸಂಘ ಕಾರ್ಯದರ್ಶಿ…
ವೈ…ಓ… : ಅತೀವೃಷ್ಠಿ ಹಾಗೂ ಅನಾವೃಷ್ಠಿಯಿಂದಾಗಿ ಜಿಲ್ಲೆಯ ರೈತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ರೈತರ ತೊಗರಿ ಹಾನಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾಗಬೇಕಿದೆ. ಜೊತೆಗೆ ಜಿಲ್ಲೆಯನ್ನು ಶಾಶ್ವತ ಬರ ಪೀಡಿತ ಜಿಲ್ಲೆ ಎಂದು ಸಹಿತ ಜಿಲ್ಲೆಯನ್ನು ಘೋಷಣೆ ಮಾಡಲಿಎಂಬುದೇ ನಮ್ಮ ಒತ್ತಾಯ