Vijaypura

*ನೋವಿನ ನಡುವೆಯೂ ಸಂಭ್ರಮದ ಅನ್ನದಾತನ ಹಬ್ಬ:ಚರಗ ಚೆಲ್ಲಿ ಸಂತಸ ಪಟ್ಟ ಅನ್ನದಾತರು*

Share

ಅಲ್ಲಿ ವಿವಿಧ ಬಗೆಯ ಖಾದ್ಯಗಳ ಸಮ್ಮಿಲನವಾಗಿತ್ತು. ನೋಡುಗರ ಬಾಯಲ್ಲಿ ನೀರು ಜಿನುಗುವಂತಹ ರಸದೌತಣ. ಬರದ ಮಧ್ಯೆ ಬರೋ ದಿನಗಳಲ್ಲಾದ್ರು ಭೂತಾಯಿ ತಮ್ಮ ಕೈ ಹಿಡಿಲಿ ಅಂತಾ ಅಲ್ಲಿನ ಜನ್ರು ಭೂತಾಯಿಗೆ ಕೃತಜ್ಞತೆ ಸಲ್ಲಿಸಿದ್ರು. ಭೂತಾಯಿಗೆ ವಿಶೇಷ ಪೂಜೆ.. ನೋವಿನ ಮದ್ಯೆದಲ್ಲೂ ಹೊಸ ನಿರೀಕ್ಷೆಯಿಂದಿರೋ ಕುಟುಂಬಸ್ಥರ ಸಂಭ್ರಮ. ಹೌದು ಇದು ವಿಜಯಪುರ ಜಿಲ್ಲೆಯಲ್ಲಿ ಕಂಡು ಬಂದ ಎಳ್ಳು ಅಮವಾಸೆಯ ಸಂಭ್ರಮ. ಉತ್ತರ ಕರ್ನಾಟಕದಲ್ಲಿ ಎಳ್ಳ ಅಮವಾಸೆ ವಿಶಿಷ್ಟ ಸಾಂಪ್ರದಾಯಿಕ ಹಬ್ಬವಾಗಿದೆ. ಹಿಂಗಾರಿ ಬೆಳೆ ಇನ್ನೇನು ರೈತರ ಕೈಸೇರೋ ಸಮಯ. ಜೋಳ, ಗೋದಿ ತೆನೆ ಒಡೆಯೋ ಸಂದರ್ಭದಲ್ಲಿ ಬರೋ ಈ ಹಬ್ಬವನ್ನು ಉತ್ತರ ಕರ್ನಾಟಕದ ಜನ್ರು ಸಂಭ್ರಮದಿಂದ ಆಚರಿಸುತ್ತಾರೆ.

ಆದ್ರೆ ಸತತ ಬರಗಾಲದಿಂದ ಬೆಂದ ರೈತರು ತಮ್ಮ ಸಂಕಷ್ಟದ ಮದ್ಯೆಯೂ ಹಬ್ಬವನ್ನು ಆಚರಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮನ್ನು ಸಲುಹಿದ ಭೂತಾಯಿ ತಮ್ಮನ್ನೆಂದು ಕೈಬಿಡೋದಿಲ್ಲ ಅನ್ನೋದು ರೈತರ ನಂಬಿಕೆ. ಹೀಗಾಗಿ ಹಬ್ಬದ ಮೂಲಕ ಭೂಮಿ ತಾಯಿಯನ್ನು ಪೂಜಿಸಿ, ಚರಗ ಚಲ್ಲೋ ಮೂಲಕ ಭೂಮಾತೆಗೆ ಕೃತಜ್ಞತೆ ಸಲ್ಲಿಸಿದ್ರು. ಇನ್ನು ವಿವಿಧ ಬಗೆಯ ಸೊಪ್ಪು, ಕಾಳುಗಳು, ಪಲ್ಯೆ, ಚಟ್ನಿ, ರೊಟ್ಟಿ ತಯಾರಿಸಿ ಮನೆಮಂದಿಯಲ್ಲ ತಮ್ಮ ಜಮೀನಿನಲ್ಲೆಲ್ಲ ಸಹಭೋಜನ ಮಾಡಿ ಸಂಭ್ರಮಿಸಿದ್ರು.ಎಳ್ಳ ಅಮವಾಸೆಗೊಂದು ವಿಶಿಷ್ಟ ಹಿನ್ನೆಲೆ ಇದೆ. ಫಸಲ ನೀಡೋ ಭೂತಾಯಿಗೆ ಮಾಗಿ ಚಳಿಯ ಈ ಸಮಯ ಗರ್ಭವತಿಯಾಗೋ ಸಮಯವಂತೆ. ಹೀಗಾಗಿ ಭೂತಾಯಿಗೆ ಸೀಮಂತ ಮಾಡೋ ಆಚರಣೆಯೇ ಎಳ್ಳು ಅಮವಾಸೆ ಅಂತ ಕೆಲವರು ಹೇಳ್ತಾರೆ. ಇನ್ನು ಕೆಲವರು ರೈತರು ಬೆಳೆದ ತರಕಾರಿ ಹಾಗೂ ಸೊಪ್ಪು ಸೂಸೋ ಸಮಯದಲ್ಲಿ ಮೊದಲು ಸೂಸಿದ ಸೊಪ್ಪಿನಿಂದ ಪೂಜೆ ಮಾಡೋದು ಎಲ್ಲ ಅಮವಾಸೆ ವಿಶೇಷ ಅಂತ ಕೆಲವ್ರು ಹೇಳ್ತಾರೆ. ಭೂಮಿ ಮತ್ತು ರೈತನ ಸಂಬಂಧ ಮೀನು ಮತ್ತು ನೀರಿನಂತೆ. ಹೀಗಾಗಿ ವರ್ಷಪೂರ್ತಿ ಅನ್ನ ನೀಡೋ ಭೂಮಿಯನ್ನು ಎಳ್ಳ ಅಮವಾಸೆ ನೆಪದಲ್ಲಿ ಸಿಂಗರಿಸಿ ಪೂಜಿಸೋದು ವಿಶೇಷವಾಗಿದೆ. ಇನ್ನು ಎಳ್ಳು ಅಮವಾಸೆ ವೇಳೆಯಲ್ಲಿ ಬರೋ ಮಾಗಿ ಚಳಿಗೆ ಹೊಂದಿಕೆಯಾಗುವಂತಹ ಆಹಾರ ಸಿದ್ಧಪಡಿಸೋದು ಕೂಡ ಈ ಹಬ್ಬದ ವಿಶೇಷ. ಆದ್ರೆ ಹಲವು ವರ್ಷದಿಂದ ಬರದ ಬವಣೆಯಲ್ಲಿ ಬಳಲುತ್ತಿರೋ ರೈತರು ಹೊಸ ನಿರೀಕ್ಷೆಯೊಂದಿಗೆ ಕೈಲಾದಷ್ಟು ಪ್ರಮಾಣದಲ್ಲಿ ಹಬ್ಬವನ್ನು ಆಚರಿಸಿರೋದು ವಿಶೇಷವಾಗಿತ್ತ

Tags:

error: Content is protected !!