Crime

ಅತ್ತೆಯನ್ನು ಸ್ಕ್ರೂಡ್ರೈವರನಿಂದ ಇರಿದು ಕೊಂದ ಪಾಪಿ ಸೊಸೆ

Share

ಅತ್ತೆಯನ್ನು ಇರಿದು ಕೊಂದು, ಬಳಿಕ ಅದೊಂದು ಬೆಂಕಿ ದುರಂತ ಎಂದು ಬಿಂಬಿಸಲು ಸೊಸೆ ಪ್ರಯತ್ನಿಸಿದ್ದ ಬೆಚ್ಚಿ ಬೀಳಿಸುವ ಘಟನೆ ತಮಿಳುನಾಡಿನ ವಿಶ್ವಾಸ್‌ನಗರದಲ್ಲಿ ನಡೆದಿದೆ.

ನವೀನಾ(೪೬) ಮೃತ ಅತ್ತೆ. ಸೊಸೆ ರೇಷ್ಮಾ ವಯಸ್ಸು(೨೭) ಕೊಲೆ ಮಾಡಿದ ಪಾಪಿ ಸೊಸೆ ಎಂದು ಗುರುತಿಸಲಾಗಿದೆ. ಮೃತ ನವೀನಾ ತಾಯಿ ಎಸ್.ಶಕಿಂಶಾ(೭೪) ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಗಳು ಬೆಂಕಿಯಿAದ ಸುಟ್ಟ ಗಾಯದಿಂದ ಸತ್ತಿದ್ದಾಳೆ. ಆದರೆ ಆಕೆಯ ತಲೆ ಮೇಲೆ ಗಾಯವಾಗಿದೆ. ನನ್ನ ಮಗಳಿಗೆ ಹೀಗೆ ಆಗುವಾಗ ಆಕೆಯ ಸೊಸೆ ರೇಷ್ಮಾ ಮತ್ತು ಅವಳ ೨ವರ್ಷದ ಮಗ ಅಲ್ಲಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ತಮಿಳುನಾಡು ಪೊಲೀಸರು ತನಿಖೆ ಕೈಗೊಂಡಿದ್ದರು. ಮೃತಳ ದೇಹವನ್ನು ಪೋಸ್ಟ್ ಮಾರ್ಟಮ್‌ಗೆ ಕಳಿಸಿದ್ದರು. ಸ್ಕೂçಡ್ರೆöÊವರ್‌ನಿಂದ ಹೊಡೆದು ತನ್ನ ಅತ್ತೆಯನ್ನು ಹತ್ಯೆ ಮಾಡಿದ್ದಾಗಿ ಪೊಲೀಸರ ತನಿಖೆ ವೇಳೆ ರೇಷ್ಮಾ ಒಪ್ಪಿಕೊಂಡಿದ್ದಾಳೆ. ನಂತರ ಆಕೆಯ ಶವಕ್ಕೆ ಸೀಮೆಎಣ್ಣೆ ಹಾಕಿ, ಬೆಂಕಿ ಹಚ್ಚಿದ್ದಾಗಿಯೂ ತಿಳಿಸಿದ್ದಾಳೆ. ನವೀನಾ ಮೊದಲು ಅಡುಗೆ ಮನೆಯಲ್ಲಿ ನೆಲದ ಮೇಲೆ ಬಿದ್ದರು. ನಂತರ ತನ್ನನ್ನು ಎತ್ತುವಂತೆ ನನ್ನ ಬಳಿ ಕೇಳಿದಳು. ಆದರೆ ಸ್ವಲ್ಪ ತಡವಾಗುತ್ತಿದ್ದಂತೆ ನನ್ನನ್ನು ಬೈಯಲು ಶುರು ಮಾಡಿದಳು. ಆಗ ನನಗೆ ಕೋಪ ಬಂದು, ಅಲ್ಲಿಯೇ ಇದ್ದ ಸ್ಕ್ರೂಡ್ರೈವರನಿಂದ ಹಲವು ಬಾರಿ ಇರಿದು, ಹೊಡೆದು ಕೊಂದೆ. ನಂತರ ಅದನ್ನು ಬೆಂಕಿ ದುರಂತ ಎಂದು ನಂಬಿಸಲು ಯತ್ನಿಸಿದೆ ಎಂದು ಒಪ್ಪಿಕೊಂಡಿದ್ದಾಳೆ. ಒಟ್ಟಿನಲ್ಲಿ ಮಾಡಿದ್ದುಣ್ಣೊ ಮಾರಾಯ ಎನ್ನುವಂತೆ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ತಾಯಿ ಸ್ಥಾನದಲ್ಲಿದ್ದ ಅತ್ತೆಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಸೊಸೆ ಸಧ್ಯ ಜೈಲು ಪಾಲಾಗಿದ್ದಾಳೆ.

 

Tags:

error: Content is protected !!