ಕಳೆದ ಎಪ್ರಿಲ್ 10 ರಂದು ಭೀಕರವಾಗಿ ಹತ್ಯೆಗೀಡಾದ ಯುತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ನಿವಾಸಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.

ನಗರದ ಮಾಳಾಪುರದ ಹಾಶ್ಮಿನಗರದಲ್ಲಿನ ಫೈರೋಜ್ ನಿವಾಸಕ್ಕೆ ಭೇಟಿ ನೀಡಿದ ಸಚಿವ ಸಂತೋಷ ಲಾಡ್ ಅವರ ಬಳಿ, ಫೈರೋಜ್ ತಾಯಿ ಬಿಬಿ ಆಯ್ಯಿಷಾ ಮೂರ್ನಾಲ್ಕು ಜನ ಮನೆಗೆ ನುಗ್ಗಿ ನಮ್ಮ ಕಣ್ಣೆದುರೇ ನನ್ನ ಮಗನನ್ನು ಕೊಂದಿದ್ದಾರೆ. ಅವರು ಬಂದು ಕುತ್ತಿಗೆಗೆ ಚಾಕು ಹಾಕುವಾಗ ಅವ್ವಾ ನನ್ನನ್ನು ಉಳಿಸು ಎಂದು ಕೂಗುತ್ತಿದ್ದ ನನ್ನ ಕಣ್ಣೆದುರೇ ಈ ಹತ್ಯೆ ನಡೆದಿದೆ. ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಲಾಡ್ ಎದುರು ಕಣ್ಣೀರು ಹಾಕಿದರು. ನಾವೇ ಪ್ರತ್ಯಕ್ಷ ಸಾಕ್ಷಿಗಳಿದ್ದು, ನಮಗೂ ಜೀವ ಭಯವಿದೆ.
ನಮಗೆ ಸೂಕ್ತ ರಕ್ಷಣೆ ನೀಡಬೇಕು. ಅಬ್ದುಲ್ ದೇಸಾಯಿ ಅವರಿಗೂ ಸಾಕಷ್ಟು ಜೀವ ಬೆದರಿಕೆ ಇದ್ದು, ಅವರಿಗೂ ರಕ್ಷಣೆ ಒದಗಿಸಬೇಕು ಈ ಪ್ರಕರಣದ ಆಳಕ್ಕೆ ಹೊಕ್ಕು ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೋ ಅವರನ್ನೆಲ್ಲ ಹುಡುಕಬೇಕು ಎಂದು ಫೈರೋಜ್ ಕುಟುಂಬಸ್ಥರು ಸಚಿವರಿಗೆ ಮನವಿ ಮಾಡಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಲಾಡ್, ಈಗಾಗಲೇ ಕೊಲೆ ಪ್ರಕರಣದಲ್ಲಿ 9ಜನ ಆರೋಪಿಗಳ ಬಂಧನವಾಗಿದೆ. ಕುಟುಂಬಸ್ಥರು ರಕ್ಷಣೆ ಕೇಳಿದ್ದಾರೆ, ಗೃಹ ಸಚಿವರೊಂದಿಗೆ ಮಾತನಾಡಿ ರಕ್ಷಣೆ ವ್ಯವಸ್ಥೆ ಮಾಡಲಾಗುವುದು. ಇನ್ನೂ ಕುಟುಂಬಸ್ಥರು ಫೈರೋಜ್ ಹತ್ಯೆಗೆ ಸಂಬಂಧಿಸಿದಂತೆ ಸಾಕ್ಷಿಗಳು ತುಂಬಾ ಇವೆ ಎಂದಿದ್ದಾರೆ. ನಾನು ಕೂಡಾ ಅವರಿಗೆ ಪೊಲೀಸರಿಗೆ ನೀಡುವಂತೆ ಮನವಿ ಮಾಡಿದ್ದಾನೆ. ಈ ಕೊಲೆ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಕಮಿಷನರವರಿಗೆ ಸೂಚಿಸಿದ್ದೇನೆ. ಆಳಕ್ಕೆ ಹೋಗಿ ತನಿಖೆ ನಡೆಸಲಾಗುವುದು, ಸದ್ಯ ತನಿಖೆ ಪ್ರಗತಿಯಲ್ಲಿದೆ. ಹತ್ಯೆ ಹಿಂದೆ ಬೇರೆಯವರ ಕೈವಾಡ ಬಗ್ಗೆ ಕುಟುಂಬಸ್ಥರು ಹೇಳಿದ್ದಾರೆ . ಅದರ ಬಗ್ಗೆ ಕಮಿಷನರವರು ಕ್ಯಾಒಎಬಲ್ ಇದ್ದಾರೆ ತನಿಖೆ ನಡೆಸಿ, ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ ಎಂದರು.
