ಬೆಳಗಾವಿ ಅನಗೋಳ ನಿವಾಸಿ ಪ್ರೇಮಾ ಜಯಂತ ಸಬನೀಸ (83)ಇಂದು ನಿಧನರಾಗಿದ್ದಾರೆ.
ಮೃತರ ಅಂತಿಮ ಇಚ್ಛೆಯಂತೆ ಡಾ.ರಾಮಣ್ಣವರ ಚಾರಿಟೆಬಲ್ ಟ್ರಸ್ಟ್ ಬೈಲಹೊಂಗಲ ಮುಖಾಂತರ ಚರ್ಮ ಹಾಗೂ ದೇಹದಾನವನ್ನು ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅವರ ಚರ್ಮನ್ನು ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಕೆಎಲ್ಇ ರೋಟರಿ ಸ್ಕೀನ್ ಬ್ಯಾಂಕ್ (ಚರ್ಮ ಬಂಡಾರ)ಕ್ಕೆ ಚರ್ಮದಾನ ಮಾಡಿ ಸುಟ್ಟಗಾಯದಿಂದ ಬಳಲುತ್ತಿರುವ ರೋಗಿಗಳಿಗೆ ಶೀಘ್ರ ಗುಣಮುಖವಾಗಲು ಸಹಕರಿಸಿದ್ದಾರೆ.ದೇಹವನ್ನು
ಹುಬ್ಬಳ್ಳಿಯ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯಕ್ಕೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ದ್ಯಾನಾರ್ಜನೆಗೆ ದೇಹವನ್ನು ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮೃತರಿಗೆ ಓರ್ವ ಪುತ್ರ ಹಾಗೂ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.
