Belagavi

ಬೆಳಗಾವಿಯಲ್ಲಿ ಭಕ್ತ ಕನಕದಾಸ ಜಯಂತಿಯ ನಿಮಿತ್ಯ ಭವ್ಯ ಮೆರವಣಿಗೆ

Share

ಕುಂದಾನಗರಿ ಬೆಳಗಾವಿಯಲ್ಲಿ ಇಂದು ದಾಸಶ್ರೇಷ್ಠ ಭಕ್ತ ಕನಕದಾಸರ 539ನೇ ಜಯಂತ್ಯುತ್ಸವದ ಸಂಭ್ರಮ ಮನೆಮಾಡಿತ್ತು. ಜಿಲ್ಲಾಡಳಿತ ಹಾಗೂ ಕುರುಬ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.

ಬೆಳಗಾವಿ ಜಿಲ್ಲಾಡಳಿತ, ಕುರುಬ ಸಮಾಜ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ದಾಸಶ್ರೇಷ್ಠ ಭಕ್ತ ಕನಕದಾಸರ 539ನೇ ಜಯಂತ್ಯುತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ಬೆಳಗಾವಿಯ ಕಣಬರ್ಗಿಯ ಭಕ್ತ ಕನಕದಾಸ ವೃತ್ತದಿಂದ ವಿಜೃಂಭಣೆಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಡೊಳ್ಳಿನ ನಿನಾದ ಮತ್ತು ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಸಾಗಿದ ಕನಕದಾಸರ ರೂಪಕ ವಾಹನಗಳ ಮೆರವಣಿಗೆ ನೋಡುಗರ ಗಮನ ಸೆಳೆಯಿತು. ಕನಕದಾಸ ವೃತ್ತದಿಂದ ಆರಂಭಗೊಂಡ ಈ ಭವ್ಯ ಮೆರವಣಿಗೆಯು ಸಾಮ್ರಾಟ್ ಅಶೋಕ್ ವೃತ್ತ, ಆರ್‌ಟಿಒ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಎಸ್ಪಿ ಆಫೀಸ್ ರಸ್ತೆ ಮಾರ್ಗವಾಗಿ ಸಾಗಿ, ಕುಮಾರಗಂಧರ್ವ ಕಲಾ ಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು.

ಇದೇ ವೇಳೆ ಮಾತನಾಡಿದ ಕುರುಬ ಸಮಾಜದ ಪ್ರಮುಖರು ಹಾಗೂ ಮಾಜಿ ಮಹಾಪೌರರಾದ ಯಲ್ಲಪ್ಪ ಕುರಬರ ಅವರು, ಬೆಳಗಾವಿಯಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಸೇರಿ ಕನಕದಾಸರ 539ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು. ನಾಡಿನ ಸಮಸ್ತ ಜನತೆಗೆ ಜಯಂತಿಯ ಶುಭಾಶಯ ಕೋರಿದ ಅವರು, ಕನಕದಾಸರ ಆದರ್ಶಗಳಂತೆ ನಾವೆಲ್ಲರೂ ಸಮಾಜದಲ್ಲಿ ಒಳ್ಳೆಯತನದಿಂದ ಬದುಕಬೇಕು ಎಂದು ಕರೆ ನೀಡಿದರು. ‘ಕುಲಕುಲ ಎಂದು ಹೊಡೆದಾಡದಿರಿ’ ಎಂಬ ಕನಕದಾಸರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದತೆಯನ್ನು ಕಾಪಾಡುವುದೇ ಈ ಆಚರಣೆಯ ಮುಖ್ಯ ಸಾರಾಂಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬೈಟ್: ಯಲ್ಲಪ್ಪ ಕುರಬರ, ಮಾಜಿ ಮಹಾಪೌರರು.
ಮೆರವಣಿಗೆಯೂ ಭಕ್ತ ಕನಕದಾಸ ವೃತ್ತದಿಂದ ಆರಂಭಗೊಂಡು, ಸಾಮ್ರಾಟ್ ಅಶೋಕ್ ವೃತ್ತ, ಆರ್.ಟಿ.ಓ ಸಂಗೊಳ್ಳಿ ರಾಯಣ್ಣ ವೃತ್ತ, ಎಸ್ಪಿ ಆಫೀಸ್ ರಸ್ತೆ ಮಾರ್ಗವಾಗಿ ಕುಮಾರಗಂಧರ್ವ ಕಲಾ ಮಂದಿರಕ್ಕೆ ತಲುಪಿ ಕೊನೆಗೊಂಡಿತು.

Tags:

error: Content is protected !!