ನವ ಭಾರತ ನಿರ್ಮಾಣಕ್ಕೆ ಸಂವಿಧಾನ ಕರಡು ಪ್ರತಿ ಅಂಗಿಕರಿಸಿದ ಈ ದಿನ ನಮ ಹೇಮ್ಮೆಯ ದಿನವಾಗಿದೆ ಎಂದು ಹುಕ್ಕೇರಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಹೇಳಿದರು.
ಹುಕ್ಕೇರಿ ತಾಲೂಕಾ ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ ಮತ್ತು ಪುರಸಭೆಗಳ ಆಶ್ರಯದಲ್ಲಿ ಭಾರತ ಸಂವಿಧಾನ ದಿನ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೋರ್ಟ ಸರ್ಕಲ್ ಬಳಿ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಪುತ್ಥಳಿ ಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಮಾದ್ಯಮಗಳೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ನವ ಭಾರತ ನಿರ್ಮಾಣಕ್ಕೆ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಸಮಿತಿಯಲ್ಲಿ ರಚನೆ ಗೊಂಡ ಸಂವಿಧಾನದ ಕರಡು ಪ್ರತಿ ಅರ್ಪಿಸಿದ ಈ ದಿನವನ್ನು ನಾವು ಸಂವಿಧಾನ ದಿನವಾಗಿ ಆಚರಿಸಿ ಸಂವಿಧಾನದ ಪಿಠಿಕೆ ವಾಚನ ಮಾಡುತ್ತೆವೆ ಎಂದರು
ನಂತರ ನಾಗವೇಣಿ ಹೋಳೆಯಾಚೆ ಸಂವಿಧಾನ ಪೀಠಿಕೆ ವಾಚನ ಮಾಡಿದರು.
ಕ್ಷೇತ್ರ ಶಿಕ್ಷಣ ಅಧಿಕಾರಿ ಶ್ರೀಮತಿ ರೇವತಿ ಮಠದ ಮಾತನಾಡಿ ಸಂವಿಧಾನ ಅರ್ಪಣೆ ಮಾಡಿದ ಈ ದಿನವನ್ನು ಶಾಲಾ ,ಕಾಲೇಜುಗಳಲ್ಲಿ ಆಚರುಸುವ ಮೂಲಕ ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ವಿಭಾಗಿಯ ನಾಮ ನಿರ್ದೆಸಶಿತ ಸದಸ್ಯ ರಮೇಶ ಹುಂಜಿ, ಸದಾ ಕಾಂಬಳೆ,
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಬಿ ಎಸ್ ಅಂಗಡಿ, ಸ್ಪೂರ್ತಿ ಬಾಗೆವಾಡಿ,ಪುರಸಭೆ ಮುಖ್ಯಾಧಿಕಾರಿ ಈಶ್ವರ ಶಿದ್ನಾಳ, ಸಂತೋಷ ಹಳ್ಳೆನ್ನವರ , ಲಗಮನ್ನಾ ಮಾಲದಾರ, ಶಿವಾನಂದ ಶೇಟ್ಟೇನ್ನವರ, ಹೇಮಲತಾ ಬಸಲಿಂಗಗೋಳ, ನಾಗವೇಣಿ ಹೋಳೆಯಾಚೆ, ರಾಘವೇಂದ್ರ ಜಕಬಾಳ, ಶೇಟ್ಟೆಪ್ಪಾ ಹರಿಜನ, ತಾಲೂಕು ಪಂಚಾಯತ ಸಹಾಯಕ ನಿರ್ದೆಶಕ ಮಠದ ಸೇರಿದಂತೆ ಸಮಾಜ ಮುಖಂಡರಾದ ಶಶಿಕಾಂತ ಹೋನ್ನಳ್ಳಿ, ಪ್ರವಿಣ ಬಾಗೇವಡಿ, ಶಂಕರ ಕಟ್ಟಿಮನಿ ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
