ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ತಿದ್ದುಪಡಿ, ಪಿಐಡಿ (PID) ಮತ್ತು ಇ-ಆಸ್ತಿ ಲಾಗಿನ್ ಅಧಿಕಾರವನ್ನು ಮರುಸ್ಥಾಪಿಸುವಂತೆ ಸಿಬ್ಬಂದಿ ಆಗ್ರಹಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಕ್ಷೇತ್ರೀಯ ಸಿಬ್ಬಂದಿಗಳ ಶಾಸನಬದ್ಧ ಕರ್ತವ್ಯಗಳ ಸುಗಮ ನಿರ್ವಹಣೆಗಾಗಿ ತಿದ್ದುಪಡಿ, ಪಿಐಡಿ (PID) ಮತ್ತು ಇ-ಆಸ್ತಿ ಲಾಗಿನ್ ಅಧಿಕಾರವನ್ನು ಮರುಸ್ಥಾಪಿಸುವಂತೆ ಕೋರಿ ಕಂದಾಯ ಶಾಖೆಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ತಂತ್ರಾಂಶದ ಮಾರ್ಪಾಡಿನಿಂದಾಗಿ ಪ್ರತಿಯೊಂದು ತಿದ್ದುಪಡಿ ಅರ್ಜಿಯ ಅನುಮೋದನೆಗೆ ಉಪ ಆಯುಕ್ತರ ಲಾಗಿನ್ಗೆ ರವಾನೆಯಾಗುತ್ತಿದ್ದು, ವಿಲೇವಾರಿಯಲ್ಲಿ ಅನಿವಾರ್ಯ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಕ್ಷೇತ್ರ ಮಟ್ಟದ ಸಿಬ್ಬಂದಿ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಂದಾಯ ನಿರೀಕ್ಷಕರು ಹಾಗೂ ಕರವಸೂಲಿಗಾರರ (ಬಿಲ್ ಕಲೆಕ್ಟರ್ಗಳ) ಲಾಗಿನ್ಗಳನ್ನು ತೆರವುಗೊಳಿಸಿರುವುದರಿಂದ ಕ್ಷೇತ್ರ ಮಟ್ಟದ ಕಂದಾಯ ಕೆಲಸಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದ್ದು, ತಾಂತ್ರಿಕ ಲೋಪದೋಷಗಳ ಹೊಣೆಗಾರಿಕೆಯ ಆತಂಕವೂ ಸಿಬ್ಬಂದಿಯನ್ನು ಕಾಡುತ್ತಿದೆ. ಆದ್ದರಿಂದ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಕಲಂಗಳ ಅನ್ವಯ ಕಂದಾಯ ನಿರೀಕ್ಷಕರು ಮತ್ತು ಕರವಸೂಲಿಗಾರರ ಲಾಗಿನ್ ಅಧಿಕಾರವನ್ನು ಮರುಸ್ಥಾಪಿಸಬೇಕು ಹಾಗೂ ದಕ್ಷಿಣ ವಲಯಕ್ಕೆ ತಕ್ಷಣವೇ ಕಂಪ್ಯೂಟರ್ ಆಪರೇಟರ್ಗಳನ್ನು ಮರುನಿಯೋಜಿಸಬೇಕು ಎಂದು ಸಂಘವು ಆಯುಕ್ತರಲ್ಲಿ ವಿನಂತಿಸಿದೆ. ಟಾಪ್ ಬ್ಯಾಂಡ್ಸ್:ಬೆಳಗಾವಿ ಪಾಲಿಕೆ ಆಯುಕ್ತರಿಗೆ ಕಂದಾಯ ನೌಕರರ ಮನವಿತಿದ್ದುಪಡಿ, ಇ-ಆಸ್ತಿ ಲಾಗಿನ್ ಮರುಸ್ಥಾಪನೆಗೆ ನೌಕರರ ಆಗ್ರಹಲಾಗಿನ್ ರದ್ದಿನಿಂದ ಕಂದಾಯ ಕೆಲಸಗಳಿಗೆ ತೀವ್ರ ಅಡ್ಡಿದಕ್ಷಿಣ ವಲಯಕ್ಕೆ ಕಂಪ್ಯೂಟರ್ ಆಪರೇಟರ್ ನಿಯೋಜಿಸಲು ಒತ್ತಾಯ
