Dharwad

24 ಗಂಟೆಯಲ್ಲಿ ಕಳ್ಳತನ ಪ್ರಕರಣ ಪತ್ತೆ: 48 ಸಾವಿರ ರೂ. ನಗದು ಹಣ ಮಹಿಳೆಗೆ ಮರಳಿಸಿದ ಪಿಎಸ್‌ಐ ರಮಜಾನ್ ನದಾಫ್

Share

ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವನ್ನು ತಕ್ಷಣ ಪತ್ತೆ ಹಚ್ಚುವಲ್ಲಿ ಪಿಎಸ್‌ಐ ರಮಜಾನ್ ನದಾಫ್ ಅವರು ಯಶಸ್ವಿಯಾಗಿದ್ದು, 48 ಸಾವಿರ ರೂಪಾಯಿ ನಗದು ಹಣ ಕಳೆದುಕೊಂಡು ಆತಂಕದಲ್ಲಿದ್ದ ಮಹಿಳೆಗೆ ಹಣ ಪತ್ತೆ ಮಾಡಿ ಮರಳಿ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು, ಧಾರವಾಡದ ಗಾಂಧಿ ಚೌಕ ಬಳಿ ಹೋಟೆಲ್ ಮುಂಭಾಗದಲ್ಲಿ ತಾಲೂಕಿನ ನರೇಂದ್ರ ಗ್ರಾಮದ ಸುವರ್ಣ ಸೊಗಲ ಎಂಬ ಮಹಿಳೆ 48 ಸಾವಿರ ರೂಪಾಯಿ ನಗದು ಹಣ ಕಳೆದುಕೊಂಡಿದ್ದರು. ಶಹರ ಪೊಲೀಸ್ ಠಾಣೆಗೆ ಈ ಕುರಿತು ಮಹಿಳೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್ ಆದ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ರಮಜಾನ್ ನದಾಫ್ ಪ್ರಕರಣ ಭೇದಿಸಿ ನಗದು ಹಣವನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಿದ್ದಾರೆ. ಇನ್ನು ಪಿಎಸ್‌ಐ ಅವರ ಕರ್ತವ್ಯ ನಿಷ್ಠೆಗೆ ಈಗ ಧಾರವಾಡ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Tags:

error: Content is protected !!