Banglore

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ‘ಗಂಗಾ’ ನಿವಾಸದ ಗೃಹಪ್ರವೇಶಕ್ಕೆ ಶುಭ ಕೋರಿದ ನಿಂಬಾಳ್ಕರ್ ದಂಪತಿ

Share

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಸರ್ಕಾರಿ ನಿವಾಸ ‘ಗಂಗಾ’ದ ಗೃಹಪ್ರವೇಶ ಸಮಾರಂಭ ನೆರವೇರಿದೆ. ಈ ವಿಶೇಷ ಸಂದರ್ಭದಲ್ಲಿ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ದಂಪತಿ ಭಾಗವಹಿಸಿ ಶುಭಾಶಯ ಕೋರಿದ್ದಾರೆ.

ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರು ತಮ್ಮ ಪತಿ, ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ನಿವಾಸ ‘ಗಂಗಾ’ದ ಗೃಹಪ್ರವೇಶ ಸಮಾರಂಭಕ್ಕೆ ತೆರಳಿ ಶುಭ ಕೋರಿದರು. ನೂತನ ಗೃಹ ಪ್ರವೇಶಿಸಿದ ಸಿಎಂ ದಂಪತಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ ನಿಂಬಾಳ್ಕರ್ ದಂಪತಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು

Tags:

error: Content is protected !!