Dharwad

ಧಾರವಾಡದ ವೀರಾಂಜನೇಯ ದೇವಸ್ಥಾನದಲ್ಲಿ ಅಚ್ಚರಿ: 17 ದಿನಗಳಾದರೂ ಕರಗದ ಬೆಣ್ಣೆ ಲೇಪನ!

Share

ಧಾರವಾಡದ ಆಂಜನೇಯ ದೇವಸ್ಥಾನದಲ್ಲಿ ಪವಾಡವೊಂದು ನಡೆದಿದ್ದು, ಭಕ್ತರನ್ನು ಬೆರಗುಗೊಳಿಸಿದೆ. ಆಂಜನೇಯ ಮೂರ್ತಿಗೆ ಬೆಣ್ಣೆ ಲೇಪನ ಮಾಡಲಾಗಿದ್ದು, ಅಚ್ಚರಿ ಎಂಬಂತೆ ಆ ಬೆಣ್ಣೆ ಲೇಪನ ಕರಗದೇ ಇರುವುದು ಈಗ ಜನರಿಗೆ ಹಾಗೂ ಭಕ್ತ ಸಮೂಹಕ್ಕೆ ಪವಾಡವಾಗಿ ಕಾಣಿಸುತ್ತಿದೆ.

ಹೌದು… ಧಾರವಾಡದ ಕೆಲಗೇರಿ ಕೃಷಿ ನಗರದ ವೀರಾಂಜನೇಯ ದೇವಸ್ಥಾನದ ಆಂಜನೇಯ ಮೂರ್ತಿಗೆ 17 ದಿನಗಳ ಹಿಂದೆ ಡ್ರೈಫ್ರೂಟ್ಸ್ ಹಾಗೂ ಬೆಣ್ಣೆ ಲೇಪನದ ಅಲಂಕಾರ ಮಾಡಲಾಗಿತ್ತು.

ಬೆಣ್ಣೆ ಸಹಜವಾಗಿ ಕರಗುವಂತಹದ್ದಾಗಿದ್ದರೂ, ಆಂಜನೇಯ ಮೂರ್ತಿಗೆ ಲೇಪನ ಮಾಡಿರುವ ಬೆಣ್ಣೆ ಕರಗದೇ ಇರುವುದು ಸ್ಥಳೀಯ ಜನರಿಗೆ ಪವಾಡವಾಗಿ ಗೋಚರವಾಗಿದೆ. ಇದು ಈಗ ಆಂಜನೇಯ ಭಕ್ತ ಸಮೂಹಕ್ಕೂ ಅಚ್ಚರಿಯಾಗಿ ಕಾಣಿಸುತ್ತಿದೆ.

ಅಕ್ಟೋಬರ್ 31 ರಂದು 12 ವರ್ಷದ ಸಾಯಿನಾಥ ಶೆಟ್ಟರ ಹುಟ್ಟುಹಬ್ಬದ ಪ್ರಯುಕ್ತವಾಗಿ ಬೆಣ್ಣೆ ಲೇಪನ ಮಾಡಲಾಗಿತ್ತು. ಆದರೆ 17 ದಿನ ಕಳೆದರೂ ಬೆಣ್ಣೆ ಲೇಪನ ಕರಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

Tags:

error: Content is protected !!