BELAGAVI

ಡಿ. 2ರಂದು ಸುವರ್ಣ ಸೌಧ ಮುತ್ತಿಗೆಗೆ ರೈತ ಸಂಘಟನೆ ಕರೆ: ಕಬ್ಬಿಗೆ ಎಸ್‌ಎಪಿ, ಬೆಳೆ ಪರಿಹಾರಕ್ಕೆ ಕೋಡಿಹಳ್ಳಿ ಚಂದ್ರಶೇಖರ ಆಗ್ರಹ

Share

ಕಬ್ಬಿನ ಎಸ್‌ಎಪಿ ಹಾಗೂ ಬೆಳೆ ಪರಿಹಾರಕ್ಕೆ ಆಗ್ರಹಿಸಿ ಡಿಸೆಂಬರ್ 2ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

 

VO: ಧಾರವಾಡದಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಬ್ಬಿನ ದರ ನಿಗದಿ ಮಾಡುವಲ್ಲಿ ಸರ್ಕಾರದ ವೈಫಲ್ಯ ಬಹಳಷ್ಟಿದೆ. ಪಕ್ಕದ ರಾಜ್ಯಗಳಲ್ಲಿ 4,000 ದಿಂದ 4,300 ರೂ. ದರ ನೀಡುತ್ತಿರುವಾಗ, ರಾಜ್ಯ ಸರ್ಕಾರ ಕೇವಲ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಜವಾಬ್ದಾರಿ ಬಿಟ್ಟು ಸುಮ್ಮನೆ ಕುಳಿತಿರುವುದು ತಪ್ಪು. ಕಾರ್ಖಾನೆಯವರು 3,800 ರೂಪಾಯಿ ಕೊಡಲು ತೀರ್ಮಾನಕ್ಕೆ ಬಂದಿದ್ದಾರೆ. ರಾಜ್ಯ ಸರ್ಕಾರ ಇದರ ಮೇಲೆ ಎಸ್‌ಎಪಿ (SAP) ನೀಡಿ ಪಕ್ಕದ ರಾಜ್ಯದಂತೆ 4,300 ರೂ. ದರ ನಿಗದಿ ಮಾಡಬೇಕು ಮತ್ತು ಎಸ್‌ಎಪಿಯನ್ನು ತಕ್ಷಣ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

 

ರಾಜ್ಯದಲ್ಲಿ 62 ಸಾವಿರ ಕೋಟಿ ರೂ. ನಷ್ಟು ಬೆಳೆ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದ್ದು, ಕೇಂದ್ರ ಸರ್ಕಾರಕ್ಕೆ 20 ಸಾವಿರ ಕೋಟಿ ರೂ. ಸಹಾಯ ಮಾಡಬೇಕೆಂದು ಕೇಳಿಕೊಂಡಿದೆ. ಮಿಸ್ಟರ್ ಶಿವಕುಮಾರ್ ಅವರೇ, ಕೇವಲ 2,500 ರೂ. ರೈತರ ಅಕೌಂಟ್‌ಗೆ ಹಾಕುತ್ತೇನೆ ಎಂದು ವಂಚನೆ ಮಾಡುತ್ತಿದ್ದೀರಿ. ಕನಿಷ್ಠ ಎಕರೆಗೆ 25,000 ರೂ. ಲೆಕ್ಕ ಹಾಕಿದ್ದರೆ ಒಳ್ಳೆಯದಿತ್ತು. ರೈತರಿಗೆ 1,35,000 ಕೋಟಿ ರೂ. ನಷ್ಟ ಆಗಿದೆ, ಆದರೆ ನೀವು 62,000 ಕೋಟಿ ರೂ. ನಷ್ಟ ಎಂದು ಅಂದಾಜು ಮಾಡಿದ್ದೀರಿ. ಆದರೂ ನೀವು ರೈತರಿಗೆ ನ್ಯಾಯಯುತವಾದ ಬೆಳೆ ನಷ್ಟ ಪರಿಹಾರವನ್ನು ಕೊಡಲೇಬೇಕು.

ಬರಗಾಲದಲ್ಲೂ ರೈತರಿಗೆ ನೋಟಿಸ್ ನೀಡಿ ಸಾಲ ವಸೂಲಿ ಮಾಡುವುದು ಬಲಾತ್ಕಾರ ಮಾಡಿದಂತೆ ಕಾಣುತ್ತಿದೆ. ಇದನ್ನು ಕೈಬಿಡಬೇಕು ಹಾಗೂ ಬೆಳೆ ಸಾಲ ಮನ್ನಾ ಮಾಡಬೇಕು. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಕೊಡಲು ಆವರ್ತ ನಿಧಿಯನ್ನು ಘೋಷಣೆ ಮಾಡಬೇಕು. ಕರ್ನಾಟಕವನ್ನು ಬರಿದು ಮಾಡುತ್ತಿದ್ದೀರಿ. ಬರುವ ಡಿಸೆಂಬರ್ 2ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ರೈತರ ಹಲವು ಬೇಡಿಕೆಗಳನ್ನಿಟ್ಟುಕೊಂಡು ಅಧಿವೇಶನದ ವೇಳೆಯಲ್ಲಿ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ.

Tags:

error: Content is protected !!