ಸವದತ್ತಿಯ ಹರ್ಷಾ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯು 2026-27 ನೇ ಹಂಗಾಮಿನ ಕಬ್ಬಿನ ಮೊದಲ ಕಂತಿನ ದರವನ್ನು ಪ್ರಕಟಿಸಿದ್ದು, ಪ್ರತಿ ಟನ್ ಕಬ್ಬಿಗೆ ಬರೋಬ್ಬರಿ ರೂ. 3,800/- ಗಳ ಬೆಲೆಯನ್ನು ಘೋಷಿಸಿದೆ. “ರೈತರೆ ನಮ್ಮ ಜೀವಾಳ” ಎಂಬ ಆಶಯದೊಂದಿಗೆ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ ಹಾಗೂ ಮೃಣಾಲ್ ಹೆಬ್ಬಾಳ್ಕರ್ ನೇತೃತ್ವದಲ್ಲಿ ಕಬ್ಬು ಬೆಳೆಗಾರ ರೈತ ಬಂಧುಗಳಿಗೆ ಈ ಮಹತ್ವದ ಸಿಹಿಸುದ್ದಿಯನ್ನು ನೀಡಲಾಗಿದೆ.
ಸವದತ್ತಿ ತಾಲ್ಲೂಕಿನ ಹರ್ಷಾ ಶುಗರ್ಸ್ ಕಾರ್ಖಾನೆಯು 2026-27 ನೇ ಹಂಗಾಮಿನ ಕಬ್ಬಿನ ಅರೆಸ್ಟ್ ಹಾಗೂ ಕ್ರಷಿಂಗ್ಗಾಗಿ ಮೊದಲ ಕಂತಿನ ದರವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ಧಾರದಂತೆ, ಪ್ರಸಕ್ತ ಸಾಲಿಗೆ ಕಬ್ಬು ಕಳುಹಿಸುವ ರೈತರಿಗೆ ಪ್ರತಿ ಟನ್ ಕಬ್ಬಿಗೆ ರೂ. 3800/- ಗಳಂತೆ ಮೊದಲ ಕಂತಿನ ಬೆಲೆ ನಿಗದಿಪಡಿಸಲಾಗಿದೆ.
ಈ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರಿಗೆ ದೊಡ್ಡ ಮಟ್ಟದ ನೆರವು ನೀಡಲಾಗಿದ್ದು, “ರೈತರೆ ನಮ್ಮ ಜೀವಾಳ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಖಾನೆಯು ಸಂಪೂರ್ಣವಾಗಿ ರೈತರ ಪರವಾದ ಮತ್ತು ಜನಪರವಾದ ನಿರ್ಧಾರವನ್ನು ಕೈಗೊಂಡಿದೆ ಎಂದು ಕಾರ್ಖಾನೆಯ ಪ್ರಕಟಣೆ ತಿಳಿಸಿದೆ.
