Vijaypura

ನಿರುಪಯುಕ್ತ ಬಾವಿಗಳಿಗೆ ಮರುಜೀವ.

Share

ತೆರೆದ ಬಾವಿಗಳಿಗೆ ಮರುಜೀವ ನೀಡುವುದರಿಂದ ಪಟ್ಟಣದ ಜನರಿಗೆ ನೀರಿನ ಆಹಾಕಾರ ತಪ್ಪಿಸಬಹುದು ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಪಿಕೆಪಿಎಸ್ ಅಧ್ಯಕ್ಷರಾದ ಬಿಜಿ ಬಿರಾದರ ಅವರು ಹೇಳಿದರು.

ಬಬಲೇಶ್ವರ ಪಟ್ಟಣದಲ್ಲಿ ಪಾಳು ಬಿದ್ದ ಬಾವಿಗಳ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರೀತಿ ಗಡೇದ ಮಾತನಾಡಿ ಪಟ್ಟಣ ಪಂಚಾಯತ ಬಬಲೇಶ್ವರ ವ್ಯಾಪ್ತಿಯಲ್ಲಿ ಸನ್ 2025-26ನೇ ಸಾಲಿನ ಅಮೃತ 2.0 ಯೋಜನೆ ಅಡಿಯಲ್ಲಿ ಮಂಜೂರಾದ ರೂ 65 ಲಕ್ಷಗಳ ಅನುದಾನದಲ್ಲಿ, ಅಂಬಲಿ ಮುತ್ತಪ್ಪ ದೇವಸ್ಥಾನದ ಆವರಣದಲ್ಲಿನ ಬಾವಿ, ಬಾವಿಕಟ್ಟಿ ಬಾವಿ, ಮತ್ತು ಹ್ಯಾಳಕಟ್ಟಿ ಬಾವಿ ಗಳನ್ನು ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯನ್ನು ಇಂದು ನೆರವೇರಿಸಿದ್ದು ಪಟ್ಟಣದ ಜನರಿಗೆ ಕುಡಿಯುವ ನೀರು ಒದಗಿಸಲು ಅನುಕೂಲಕರವಾಗಲಿದೆ ಎಂದು ಹೇಳಿದರು.

ನವೀನ ಜಂಗಮಶೆಟ್ಟಿ ಮಾತನಾಡಿ ಬಬಲೇಶ್ವರ ಪಟ್ಟಣದ ಮೇಲ್ಭಾಗದಲ್ಲಿ ಕರೆ ಇರುವುದರಿಂದ ಪಟ್ಟಣದಲ್ಲಿನ ಜನರಿಗೆ ಕುಡಿಯೋ ನೀರಿಗಾಗಿ ಬಾವಿಗಳು ಅತಿ ಅವಷ್ಯವಿರುದರಿಂದ ಬಾವಿಗಳ ಅಭಿವೃದ್ಧಿ ಕಾರ್ಯ ಸ್ವಾಗತ ಎಂದು ಹೇಳಿದರು.

ವಿ ಎಸ್ ಪಾಟೀಲ ಮಾತನಾಡಿ ಈ ವರ್ಷ ಮಳೆಯಾಗದೆ ಕುಡಿಯೋ ನೀರಿಗೆ ಆಹಾಕಾರ ಎದುರಾಗಬಾರದು ಎಂಬ ದೃಷ್ಟಿಯಿಂದ ಪಟ್ಟಣ ಪಂಚಾಯತ ಅಧಿಕಾರಿಗಳು ಹಮ್ಮಿಕೊಂಡಿರುವ ಅಭಿವೃದ್ಧಿ ಕಾಮಗಾರಿ ಒಳ್ಳೆಯದು ಮತ್ತು ಈ ಬಾವಿ ನೀರನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈರಣ್ಣ ಶೀರಮಗೊಂಡ.
ಈರಗೋಂಡ ಬಿರಾದಾರ. ಬಸವರಾಜ ಕುರುವಿನಶೆಟ್ಟಿ.
ಶಂಕರಗೌಡ ಬಿರಾದಾರ.
ಗುರುಪಾದಪ್ಪ ಭಾವಿಕಟ್ಟಿ, ಶಿವನಿಂಗಪ್ಪ ಜಂಗಮಶೆಟ್ಟಿ, ಸದುಗೌಡ ಪೋಲಿಸಗೋಳ. ಪಪಂಚಾಯತ ಸಿಬ್ಬಂದಿ ವರ್ಗ ಸೇರಿದಂತೆ ಊರಿನ ಹಲವಾರು ಗಣ್ಯರು ಭಾಗಿಯಾಗಿದ್ದರು.

Tags:

error: Content is protected !!