ಧಾರವಾಡ ಜಿಲ್ಲೆಯ ಪುಡಕಲಕಟ್ಟಿಯಲ್ಲಿ ನಮ್ಮ ಒಡೆತನದ ಶ್ರೀ ಮೃಣಾಲ್ ಶುಗರ್ಸ್ ನಿಯಮಿತದ ನೂತನ ಕಾರ್ಖಾನೆಯ ಭವ್ಯ ಉದ್ಘಾಟನಾ ಸಮಾರಂಭವು ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಹಾಗೂ ಗಣ್ಯರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಈ ಮಹತ್ಪೂರ್ಣ ಕೈಗಾರಿಕೆಯ ಸ್ಥಾಪನೆಯಿಂದ ಕೇವಲ ಒಂದು ಕಾರ್ಖಾನೆ ಆರಂಭವಾಗಿಲ್ಲ, ಬದಲಿಗೆ ಈ ಭಾಗದ ರೈತರ ದೀರ್ಘಕಾಲದ ಕನಸು ಸಾಕಾರಗೊಂಡಿದೆ. ತಾವು ಬೆವರು ಹರಿಸಿ ಬೆಳೆದ ಕಬ್ಬಿಗೆ ಹತ್ತಿರದಲ್ಲೇ ಸೂಕ್ತ ಮಾರುಕಟ್ಟೆ ಹಾಗೂ ಉತ್ತಮ ಬೆಲೆ ದೊರೆಯುವುದರಿಂದ ಸುತ್ತಮುತ್ತಲಿನ ರೈತ ಮುಖಂಡರು ಮತ್ತು ಅನ್ನದಾತರು ಹರ್ಷಗೊಂಡು, ಮೃಣಾಲ್ ಶುಗರ್ಸ್ ತಮಗೆ ಹೊಸ ಭರವಸೆಯ ವೇದಿಕೆಯಾಗಲಿದೆ ಎಂದು ಸಂಭ್ರಮಿಸುತ್ತಿರುವುದು ನಮಗೆ ಅಪಾರ ಹೆಮ್ಮೆಯನ್ನು ತಂದಿದೆ.

ಅಲ್ಲದೆ, ನಮ್ಮದೇ ನೆಲದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಅವರ ಬದುಕಿಗೆ ದಾರಿದೀಪವಾಗುತ್ತಿರುವುದು ಈ ಯೋಜನೆಯ ಅತ್ಯಂತ ಸಾರ್ಥಕ ಹಾಗೂ ಐತಿಹಾಸಿಕ ಕ್ಷಣವಾಗಿದೆ. ಈ ಪ್ರಾದೇಶಿಕ ಆರ್ಥಿಕ ಪ್ರಗತಿಯ ಪಯಣ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಮುಂದುವರಿಯಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೂಲಿ ಸಂಬಯ್ಯನವರಮಠದ ಶ್ರೀ ಉಮೇಶ್ವರ ಶಿವಾಚಾರ್ಯರು, ಶ್ರೀ ಪುಂಡಲೀಕ್ ಶಾಸ್ತ್ರಿಗಳು, ಉಪ್ಪಿನ ಬೆಟಗೇರಿಯ ಮೂರುಸಾವಿರ ವೀರಕ್ತಮಠದ ಶ್ರೀ ಮ.ನಿ.ಪ್ರ.ಸ್ವ ಕುಮಾರ ವೀರುಪಾಕ್ಷ ಮಹಾಸ್ವಾಮಿಗಳು, ಕರಡಿಗುಡ್ಡದ ಶ್ರೋ ಬೃ ಶ್ರೀ ಶಂಕರಾನಂದ ಮಹಾಸ್ವಾಮಿಗಳು, ಪುಡಕಲಕಟ್ಟಿಯ ಆತ್ಮಾನಂದ ಆಶ್ರಮದ ಪರಮಪೂಜ್ಯ ಶ್ರೀ ಸಮರ್ಥ ಶಿವಾನಂದ ಮಹಾಸ್ವಾಮಿಗಳು, ಗರಗದ ಜಗದ್ಗುರು ಶ್ರೀ ಗುರು ಮಡಿವಾಳೇಶ್ವರ ಕಲ್ಮಠದ ಶ್ರೋ ಬ್ರ ಶ್ರೀ ಆತ್ಮಾರಾಮ ಮಹಾಸ್ವಾಮಿಗಳು, ಯಾದವಾಡ ಮುಳಮುತ್ತಲ ಆನಂದಧಾಮ ಶ್ರೀ ಸಿದ್ದಾರೂಢ ಮಠದ ಪರಮಪೂಜ್ಯ ಶ್ರೀ ಆನಂದ ಮಹಾಸ್ವಾಮಿಗಳು ಹಾಗೂ ಧಾರವಾಡ ಮುರುಘಾಮಠದ ಶ್ರೀ ಮ.ನಿ.ಪ್ರ.ಸ್ವ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು.
ಈ ವೇಳೆ ಧಾರವಾಡ ಗ್ರಾಮೀಣ ಶಾಸಕರಾದ ವಿನಯ ಕುಲಕರ್ಣಿ, ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಕಾಂಗ್ರೆಸ್ ಮುಖಂಡರಾದ ದೀಪಕ್ ಚಿಂಚೂರೆ, ತವನಪ್ಪ ಅಷ್ಟಗಿ, ಬೆಳಗಾವಿ ಗ್ರಾಮೀಣ ಭಾಗದ ಪ್ರಮುಖ ಮುಖಂಡರು, ಬೈಲಹೊಂಗಲ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಎಲ್ಲ ನಿರ್ದೇಶಕರು, ಎಂ.ಕೆ.ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಎಲ್ಲ ನಿರ್ದೇಶಕರು, ಸುತ್ತಮುತ್ತಲಿನ ವಿವಿಧ ಗ್ರಾಮದ ರೈತರು, ರೈತ ಸಂಘಟನೆಗಳ ಮುಖಂಡರು ಮುಂತಾದವರು ಉಪಸ್ಥಿತರಿದ್ದರು
