Uncategorized

ಜಮಖಂಡಿ ಶುಗರ್ಸ್‌ಗೂ ಆನಂದ ನ್ಯಾಮಗೌಡರಿಗೂ ಯಾವುದೇ ಸಂಬಂಧವಿಲ್ಲ: ನಿರ್ದೇಶಕ ಮಂಡಳಿ ಸ್ಪಷ್ಟನೆ

Share

ಜಮಖಂಡಿ ಶುಗರ್ಸ್‌ ನಿಯಮಿತಕ್ಕೂ ಆನಂದ ಸಿದ್ಧು ನ್ಯಾಮಗೌಡರಿಗೂ ಯಾವುದೇ ರೀತಿಯ ವ್ಯವಹಾರಿಕ ಸಂಬಂಧವಿಲ್ಲ ಎಂದು ನಿರ್ದೇಶಕ ಮಂಡಳಿ ಸ್ಪಷ್ಟಪಡಿಸಿದೆ. ಅವರೊಂದಿಗೆ ವ್ಯವಹರಿಸಿದರೆ ಅದು ಸಾರ್ವಜನಿಕರ ಸ್ವಂತ ಜವಾಬ್ದಾರಿ ಎಂದು ಅಧಿಕೃತ ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

ಮೆ|| ಜಮಖಂಡಿ ಶುಗರ್ಸ್‌ ಲಿಮಿಟೆಡ್‌ನ ನಿರ್ದೇಶಕ ಮಂಡಳಿಯ ಪರವಾಗಿ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ ಕಡಪಟ್ಟಿ ಹಾಗೂ ನಿರ್ದೇಶಕ ರಾಜೇಂದ್ರ ಬಿ.ಪಾಟೀಲ ಅವರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಆನಂದ ಸಿದ್ಧು ನ್ಯಾಮಗೌಡ ಅವರು ಯಾವುದೇ ಸಾಮರ್ಥ್ಯ, ರೀತಿ ಅಥವಾ ರೂಪದಲ್ಲಿ ಕಂಪನಿಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ತಿಳಿಸಿದ್ದಾರೆ. ಕಂಪನಿಯ ಪರವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿಕೊಳ್ಳುವ ಆನಂದ ನ್ಯಾಮಗೌಡರೊಂದಿಗೆ ವ್ಯವಹರಿಸಿದರೆ ಅದು ಅವರದೇ ಸ್ವಂತ ರಿಸ್ಕ್ ಮತ್ತು ಜವಾಬ್ದಾರಿಗೆ ಸೇರಿದ್ದಾಗಿರುತ್ತದೆ. ಅಂತಹ ಯಾವುದೇ ಕೃತ್ಯಗಳು, ಪಾವತಿಗಳು ಹಾಗೂ ವ್ಯವಹಾರಗಳಿಗೆ ಮುಂಬರುವ ದಿನಗಳಲ್ಲಿ ಜಮಖಂಡಿ ಶುಗರ್ಸ್‌ ಲಿಮಿಟೆಡ್ ಯಾವುದೇ ರೀತಿಯಲ್ಲೂ ಜವಾಬ್ದಾರನಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

Tags:

error: Content is protected !!