ವ್ಯಕ್ತಿಯೋರ್ವ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಧಾರವಾಡದ ಶಾಂತಿನಿಕೇತನ ನಗರದಲ್ಲಿ ನಡೆದಿದ್ದು, ವಿಷಯ ಹೊರ ಬರುತ್ತಿದಂತೆ ಸ್ಥಳೀಯರು ಬೆಚ್ಚಿಬಿದಿದ್ದಾರೆ.
ಧಾರವಾಡ ನಗರದ ಶಾಂತಿನಿಕೇತನದಲ್ಲಿನ ಕರಿಯಮ್ಮ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಓರ್ವ ವ್ಯಕ್ತಿಯಿಂದ ದೇವಸ್ಥಾನದ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಸುಮಾರು ಹೊತ್ತು ಪ್ರಯತ್ನಿಸಿದರೂ ಬಾಗಿಲಯ ತೆರೆದಿಲ್ಲ. ವ್ಯಕ್ತಿಯ ಕಳ್ಳತನ ಯತ್ನದ ದೃಶ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ. ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಬೆಳಗ್ಗೆ ದೇವಸ್ಥಾನದ ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ. ಕಳ್ಳತನಕ್ಕೆ ಯತ್ನಿಸಿ ಕೊನೆಗೆ ಅಲ್ಲಿಂದ ವ್ಯಕ್ತಿ ವಾಪಸಾಗಿದ್ದಾನೆ. ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
