ಬೆಂಗಳೂರಿನಲ್ಲಿ ಎಸ್ ಐ ವಿರುದ್ಧ ಕಾಂಗ್ರೆಸ ಪ್ರತಿಭಟನೆ ನಡೆಸುತ್ತಿದ್ದು, ಈ ಕಡೆ ಧಾರವಾಡದಲ್ಲೂ ಕಾಂಗ್ರೆಸ್ ವತಿಯಿಂದ ವೋಟ್ ಬಾಚಾವೋ ದೇಶ ಬಚಾವೋ ಘೋಷಣೆಯಡಿ ಬೃಹತ್ ಪಾದಯಾತ್ರೆಯ ಮೂಲಕ ಕೇಂದ್ರ ಸರ್ಕಾರ, ಕೇಂದ್ರ ಮುಖ್ಯ ಚುನಾವಣೆ ಆಯುಕ್ತರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಧಾರವಾಡ ಜಿಲ್ಲಾ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಧಾರವಾಡ ಹೃದಯ ಭಾಗದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಬಿಜೆಪಿ ಸೇರಿ ಕೇಂದ್ರ ಮುಖ್ಯ ಚುನಾವಣೆ ಆಯಕ್ತರ ವಿರುದ್ಧ ಘೋಷಣೆ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲ್ಲೂ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಯತ್ತಲೇ ಬರುತ್ತಿದೆ.ಇಷ್ಟು ದಿನ ಸಿಬಿಐ, ಇಡಿ ದುರುಪಯೋಗ ಮಾಡಿದೆ. ಈಗ ಎಸಐಆರ್ ಮೂಲಕ ಕೇಂದ್ರ ಚುನಾವಣಾ ಆಯೋಗ ದುರುಪಯೋಗ ಮಾಡಿಕೊಳ್ಳುತ್ತಿದೆ. ದೇಶದಲ್ಲಿ ವೋಟ್ಗಳನ್ನು ಡಿಲಿಟ್ ಮಾಡಲಾಗುತ್ತಿದೆ. ಅಕ್ಪಸಂಖ್ಯಾತ, ಹಿಂದಳುದವರ, ದಲಿತ ಓಟ್ಗಳನ್ನು ಟಾರ್ಗೆಟ್ ಮಾಡಿಕೊಂಡು ಮತ ತೆಗೆದು ಹಾಕಲಾಗುತ್ತಿದೆ. ಹಾಗಾಗಿ ಕೇಂದ್ರ ಚುನಾವಣಾ ಮುಖ್ಯ ಅಯುಕ್ತರಾದ ಜ್ಞಾನೇಶ ಕುಮಾರ ರಾಜೀನಾಮೆ ನೀಡಬೇಕು, ಜತೆಗೆ ಎಸ್ಐಅರ್ ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

