ಇತ್ತೀಚೆಗೆ ಧಾರವಾಡ ತಹಶಿಲ್ದಾರರ ಸಚ್ಚಿದಾನಂದ ರವರು ಲೋಕಾಯುಕ್ತರ ಟ್ರ್ಯಾಪ್ ಸೇರಿ ಜಿಲ್ಲೆಯಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತರ ಕೈಯಲ್ಲಿ ಸಿಕ್ಕಿಬಿದ್ದಿರುವ ಘಟನೆಯನ್ನು ಪ್ರಸ್ತಾಪಿಸಿ, ಧಾರವಾಡ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಎದುರೇ ಶಾಸಕ ವಿನಯ ಕುಲಕರ್ಣಿಯವರು ಅಧಿಕಾರಿಳಿಗೆ ಚಳಿ ಬೀಡಿಸಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಜಿಲ್ಲೆಯಲ್ಲಿ ಯಾವ ಅಧಿಕಾರಿ ಕರೆಪ್ಶ್ಯನ್ ಮಾಡಿದ್ರೆ ನಾನು ಸುಮ್ಮನೆ ಇರಲ್ಲ. ಎಲ್ಲ ಅಧಿಕಾರಿಗಳು ಲಕ್ಷ ಲಕ್ಷ ಗಟ್ಟಲೆ ಲಂಚ ಕೇಳ್ತಾ ಇದಾರೆ. ಜಿಲ್ಲೆಯಲ್ಲಿ ಯಾವೊಬ್ಬ ಅಧಿಕಾರಿ ಲಂಚ ಕೇಳಿದ್ರೆ ಅಮಾನತು ಮಾಡುತ್ತೆವೆ. ಧಾರವಾಡ ತಹಶಿಲ್ದಾರ್ ಸಚ್ಚಿದಾನಂದ ಕುಚನೂರು, ಹೆಸ್ಕಾಂ ಇ ಇ ಗುಲ್ಜಾರ್ ಟ್ರ್ಯಾಪ್ ಆಗಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಗದೀಶ್ ಪಾಟೀಲ ಮೆಲೆ ಗರಂ ಆದ ಶಾಸಕ ವಿನಯ ಕುಲಕರ್ಣಿ, ಜಿಲ್ಲೆಯಲ್ಲಿ ಬ್ರಷ್ಟಾಚಾರ ತುಂಬಿ ತುಳಕ್ತಾ ಇದೆ. ನಿನ್ನಂತ ಅಧಿಕಾರಿಗಳನ್ನ ಬಹಳ ನೋಡಿದ್ದೆನೆ. ಮೂವತ್ತು ವರ್ಷ ರಾಜಕೀಯದಲ್ಲಿ ನಿನ್ನಂತ ಕರೆಪ್ಶ್ ನ್ ಮಾಡುವ ಅಧಿಕಾರಿಯನ್ನ ಎಲ್ಲೂ ನೋಡಿಲ್ಲ. ಸರಕಾರ ವೇತನ ಹರಾಮಿ ಕೊಡುತ್ತಾ ನಿಮಗೆ, ಧಾರವಾಡ ಸೂತ್ತಲೂ 10 ಕಿ ಮೀ ಲ್ಯಾಂಡ್ ರೇಟ್ ಹೆಚ್ಚಾಗಿದೆ. ಅಧಿಕಾರಿಗಳು ಕೂಡಾ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಚೇರಿಗಳಲ್ಲಿ ಅಂಗಡಿಗಳನ್ನ ಇಟ್ಟುಕ್ಕೊಂಡಿದ್ದಾರೆ. ಇನ್ನು ಮುಂದೆ ಜಿಲ್ಲೆಯಲ್ಲಿ ಕರಪಶ್ಯನ್ ಕಡಿಮೆ ಆಗಬೇಕು. ಯಾವ ಶಾಸಕರು ನಿಮಗೆ ತೊಂದರೆ ಕೊಟ್ಟಿಲ್ಲ. ರೈತರಿಗೂ ತೊಂದರೆ ಕೊಡುತ್ತಿರಿ, ಇದು ಜಿಲ್ಲೆಯಲ್ಲಿ ಅತಿರೇಖವಾಗಿದೆ. ನಿನ್ಮ ಬಗ್ಗೆ ನನಗೆ ಬಹಳ ಗೊತ್ತಿದೆ. ಇನ್ನ ನೀನು ಹಾಪ್ ಚಡ್ಡಿ ಹಕ್ಕೊತಿದ್ದಿ ಅವಾಗ ರಾಜಕೀಯಕ್ಕೆ ಬಂದಿದ್ದೆನೆ ನೆನಪಿರಲಿ ಎಂದು ವಿನಯ ಕುಲಕರ್ಣಿಯವರು ಖಡಕ್ ವಾರ್ನಿಂಗ್ ಮಾಡಿದರು.
