ಉತ್ತರಾಖಂಡದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಬಲಿಯಾದ ಕರುನಾಡಿನ ಹೆಮ್ಮೆಯ ಪುತ್ರ, ಸಿಸಿಬಿ ಇನ್್ ಪೆಕ್ಟರ್ ಅರುಣ್ ಸಾಳುಂಕೆ ಅವರ ಪಾರ್ಥಿವ ಶರೀರ ಇಂದು ಅವರ ಸ್ವಗ್ರಾಮ ಅಥಣಿ ತಾಲೂಕಿನ ಅರಟಾಳಕ್ಕೆ ಆಗಮಿಸಿದೆ.
ಹುಟ್ಟೂರಿನಲ್ಲಿ ಕಣ್ಣೀರಿನ ಸಾಗರದಲ್ಲಿ ಮುಳುಗಿರುವ ಕುಟುಂಬಸ್ಥರ ಆಕ್ರಂದನ ಹಾಗೂ ನೆರೆದವರ ರೋಧನ ನೆರೆದವರ ಎದೆಎಲುಬನ್ನು ಕರಗಿಸುವಂತಿದೆ.

ಉತ್ತರಾಖಂಡದ ಚಾರ್ಧಾಮ್ ಯಾತ್ರೆ ವೇಳೆ ಸಂಭವಿಸಿದ ಆಘಾತಕಾರಿ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಬೆಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಅವರ ಮೃತದೇಹ ಇಂದು ಅವರ ಸ್ವಗ್ರಾಮವಾದ ಅಥಣಿ ತಾಲೂಕಿನ ಅರಟಾಳ ಗ್ರಾಮಕ್ಕೆ ತಲುಪಿದೆ. ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ರಾಜಕೀಯ ಗಣ್ಯರು, ಆಪ್ತ ಸ್ನೇಹಿತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬಿದ್ದು ತಮ್ಮ ನೆಚ್ಚಿನ ಅಧಿಕಾರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲೇ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

“ದೇವರು ಒಳ್ಳೆಯವರನ್ನು ಕಾಯುತ್ತಾನೆ ಎಂಬ ನಂಬಿಕೆ ಈಗ ಸುಳ್ಳಾಗಿದೆ” ಎಂದು ಮಗನನ್ನು ಕಳೆದುಕೊಂಡ ತಂದೆ ಮನೋಹರ ಸಾಳುಂಕೆ ಅವರು ಬಿಕ್ಕಿಬಿಕ್ಕಿ ಅಳುತ್ತಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅತ್ಯಂತ ಭಕ್ತಿ ಹಾಗೂ ನಂಬಿಕೆಯಿಂದ ಚಾರ್ಧಾಮ್ ಯಾತ್ರೆಗೆ ತೆರಳಿದ್ದ ಐವರು ಸ್ನೇಹಿತರ ಪೈಕಿ ತಮ್ಮ ಮಗನನ್ನು ಆ ದೇವರು ಕೇದಾರನಾಥ ಮತ್ತು ಬದರಿನಾಥದಲ್ಲೇ ತನ್ನ ಬಳಿ ಕರೆದುಕೊಂಡಿದ್ದಾನೆ ಎಂದು ಅವರು ಕಣ್ಣೀರುಹಾಕಿದ್ದಾರೆ. ಸಾಮಾನ್ಯ ಸಿಪಾಯಿಯಿಂದ ಹಿಡಿದು ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದ ತಮ್ಮ ಮಗನ ಗುಣವನ್ನು ನೆನೆದು ತಂದೆ ಪಟ್ಟ ಯಾತನೆ ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸಿದೆ.

ಅಗಲಿದ ಗೆಳೆಯನನ್ನು ನೆನೆದು ಕೆಎಎಸ್ ಅಧಿಕಾರಿ ಅಶೋಕ್ ಮಿರ್ಜಿ ಅವರು ಕಣ್ಣೀರಿಟ್ಟಿದ್ದಾರೆ. ಶಾಲಾ ದಿನಗಳಿಂದಲೂ ತಮ್ಮೊಂದಿಗೆ ಒಡನಾಟ ಹೊಂದಿದ್ದ ಅರುಣ್ ಅವರು, ತಾವೊಬ್ಬ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದಾಗ ತಾವು ಪಿಎಸ್ಐ ಆಗಿದ್ದುಕೊಂಡು ‘ನೀನು ಕೆಎಎಸ್ ಓದು, ಅಧಿಕಾರಿಯಾಗುತ್ತೀಯ’ ಎಂದು ಸದಾ ಪ್ರೇರೇಪಿಸುತ್ತಿದ್ದ ಸ್ಮರಣೆಯನ್ನು ಹಂಚಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಒಟ್ಟಿಗೆ ಕೋಚಿಂಗ್ ಪಡೆದ ದಿನಗಳನ್ನು, ದೆಹಲಿ ತರಬೇತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಅವರ ಸ್ನೇಹಮಯ ಸ್ವಭಾವ ಹಾಗೂ ತಮ್ಮ ಯಶಸ್ಸಿಗೆ ಅವರ ಬೆಂಬಲವೇ ಕಾರಣ ಎಂಬುದನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಅರುಣ್ ಸಾಳುಂಕೆ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದ ಬಳಿಕ, ರಾಷ್ಟ್ರಧ್ವಜವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಣ್ಣೀರಿನೀರಿಟ್ಟಿದ್ದು, ಇಡೀ ಗ್ರಾಮದಲ್ಲಿ ಶೋಕಮೂಡಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದ ಹೆಮ್ಮೆಯ ಪುತ್ರ ಅರುಣ್ ಸಾಳುಂಕೆ ಅವರ ಅಂತ್ಯಕ್ರಿಯೆಯು ಜಿಲ್ಲಾಡಳಿತದ ಸಹಕಾರದೊಂದಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳ ಮೂಲಕ ನೆರವೇರಿತು. ಸೇನಾ ಗೌರವದ ಸೂಚಕವಾಗಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಧ್ವಜವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮಗನ ಮೃತದೇಹವನ್ನು ಕಂಡು ತಂದೆ-ತಾಯಿ, ಹೆಂಡತಿ ಮತ್ತು ಮಕ್ಕಳ ಆಕ್ರಂದನ ಮುಗಿಲುಮುಟ್ಟಿತ್ತು. ಕುಟುಂಬದ ಈ ತೀವ್ರ ಸಂಕಷ್ಟವನ್ನು ಕಂಡು ಸ್ಥಳದಲ್ಲಿದ್ದ ಗ್ರಾಮಸ್ಥರು ಹಾಗೂ ಗಣ್ಯರು ಕಣ್ಣೀರುಹಾ1ದರು.

