ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದು, ಕಬ್ಬಿನ ಬಿಲ್ ಪಾವತಿಯಲ್ಲಿ ಹಾಗೂ ದರ ನಿಗದಿಯಲ್ಲಿ ಸಂಪೂರ್ಣ ಮೋಸ ಮಾಡುತ್ತಿದ್ದಾರೆ ಎಂದು ರೈತ ಸಂಘದ ಮುಖಂಡ ಚೂನ್ನಪ್ಪ ಪೂಜೇರಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 48 ರೂ. ನಿಗದಿಯಾಗಿದ್ದು, ಆದರೆ ಪ್ರಸ್ತುತ 54 ರೂ. ಗಳಷ್ಟು ಸರ್ಕಾರದ ಟೆಂಡರ್ ಇದ್ದರೂ ಕೇವಲ 50 ರೂ. ನೀಡಿ ಪ್ರತಿ ಟನ್ ಕಬ್ಬಿಗೆ 4,000 ರೂ. ಬಿಲ್ ನೀಡುತ್ತಿರುವುದು ಸರಿಯಲ್ಲ. ಕನಿಷ್ಠ 54 ರೂ. ನಂತೆ ಹಣ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕಬ್ಬು ಹಾಗೂ ಎಸ್ಎಪಿ ದರದ ಬಗ್ಗೆ ಮಾಧ್ಯಮಗಳು ಮತ್ತು ರೈತರು ಹಲವು ಬಾರಿ ಪ್ರಶ್ನಿಸಿದರೂ ರಾಜ್ಯ ಸರ್ಕಾರದ ಸಚಿವರು ಯಾರೂ ಸಹ ಎಸ್ಎಪಿ ಬಗ್ಗೆ ಬಾಯಿಬಿಡುತ್ತಿಲ್ಲ ಮತ್ತು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಕಬ್ಬು ಪ್ರತಿವರ್ಷ ಬೆಳೆಯಬೇಕೆ ವಿನಃ ರೈತರು ಎಂಟು ದಿನಕ್ಕೊಮ್ಮೆ ಒಣಗಿ ಹೋಗಬಾರದು. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಬೆಳಗಾವಿ ಜಿಲ್ಲೆಗೆ ಬರುವ 50 ಲಕ್ಷ ಜನರನ್ನು ಸೇರಿಸಿ ಉಗ್ರ ಹೋರಾಟ ನಡೆಸಲಾಗುವುದು ಹಾಗೂ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಕಾರ್ಖಾನೆ ಮಾಲೀಕರು ಹಾಗೂ ಸರ್ಕಾರ ಕೂಡಲೇ ರೈತರಿಗೆ ಬಾಗಿದ ತಲೆ ಮತ್ತು ಪ್ರಾಮಾಣಿಕ ನ್ಯಾಯ ಒದಗಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
