Chikkodi

ಗುರ್ಲಾಪುರದಲ್ಲಿ ಡಿ.ಕೆ. ಶಿವಕುಮಾರ್‌ ಅವರ ಅಣುಕು ಶವ ಯಾತ್ರೆ… ಮೌನ ಆಚರಣೆ ಮಾಡಿ ಕಣ್ಣೀರು ಹಾಕಿ ರೈತರ ವಿನೂತನ ಪ್ರತಿಭಟನೆ

Share

ಚಿಕ್ಕೋಡಿ:​ಗುರ್ಲಾಪುರ  ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾ ನಿರತ ರೈತರು ರಾಜ್ಯ ಸರ್ಕಾರದ ವಿರುದ್ಧ ವಿಭಿನ್ನ ಹಾಗೂ ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

​ಪ್ರತಿಭಟನೆಯ ಭಾಗವಾಗಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪ್ರತಿಕೃತಿಯನ್ನು ತಯಾರಿಸಿ ಅಣುಕು ಶವಯಾತ್ರೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳದಲ್ಲಿದ್ದ ಮಹಿಳೆಯರು ಮತ್ತು ರೈತರು “ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮೃತಪಟ್ಟಿದ್ದಾರೆ” ಎಂದು ಸಾಂಕೇತಿಕವಾಗಿ ಹೇಳುತ್ತಾ, ಬೊಬ್ಬೆ ಹೊಡೆದು, ಕಣ್ಣೀರಿಟ್ಟು ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು.

​ಮೆರವಣಿಗೆಯ ಬಳಿಕ ಮೃತರ ಆತ್ಮಕ್ಕೆ ಶಾಂತಿ ಕೋರುವಂತೆ ಸಾಂಕೇತಿಕವಾಗಿ ೫ ನಿಮಿಷಗಳ ಕಾಲ ಮೌನಾಚರಣೆ ಸಹ ಆಚರಿಸಲಾಯಿತು. ರೈತರ ಬೇಡಿಕೆಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಹೋರಾಟಗಾರರು, ತಮ್ಮ ಹಕ್ಕುಗಳ ಈಡೇರಿಕೆಗೆ ಉಗ್ರ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.

Tags:

error: Content is protected !!