Chikkodi

ಗುರ್ಲಾಪೂರದಲ್ಲಿ ತೀವ್ರಗೊಂಡ ರೈತರ ಹೋರಾಟ: ಜೈಲ್ ಭರೋ ಚಳವಳಿಗೆ ಭರ್ಜರಿ ಸಿದ್ಧತೆ!

Share

ಗುರ್ಲಾಪೂರದಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇಂದು ಬೃಹತ್ ಮಟ್ಟದ ಚಳವಳಿಗೆ ಸಾಕ್ಷಿಯಾಯಿತು. ಸರಕಾರದ ವಿಳಂಬ ನೀತಿಯನ್ನು ಖಂಡಿಸಿ ಸಾವಿರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದು, ಇಡೀ ಗುರ್ಲಾಪೂರ ಪ್ರದೇಶ ರೈತ ಹೋರಾಟದ ಬಿಸಿಗೆ ಕಾವು ಪಡೆದುಕೊಂಡಿದೆ.

ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಾರು ರೈತರು, ಮಹಿಳೆಯರು ಹಾಗೂ ಯುವಕರು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ರೈತರು ಜಮಾಯಿಸಿದ್ದು, ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಈ ಬೃಹತ್ ಹೋರಾಟದ ಮುಂಚೂಣಿಯನ್ನು ರೈತ ನಾಯಕರಾದ ಚೂನ್ನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ವಹಿಸಿಕೊಂಡಿದ್ದಾರೆ. ರೈತರ ಹಕ್ಕುಗಳಿಗಾಗಿ ಸರಕಾರ ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು, ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸುವುದಾಗಿ ನಾಯಕರು ಎಚ್ಚರಿಸಿದ್ದಾರೆ.

ಸರಕಾರವು ರೈತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದೇ ಇದ್ದರೆ, ಮುಂದಿನ ಹಂತವಾಗಿ ‘ಜೈಲ್ ಭರೋ ಬೃಹತ್ ಚಳವಳಿ ನಡೆಸಲು ರೈತ ಸಂಘಟನೆಗಳು ಸಂಪೂರ್ಣ ಸಿದ್ಧತೆ ನಡೆಸಿವೆ.

ಸದ್ಯಕ್ಕೆ ರೈತರು ಸರಕಾರದ ಅಧಿಕೃತ ನಿರ್ಧಾರ ಮತ್ತು ಭರವಸೆಗಾಗಿ ಕಾಯುತ್ತಿದ್ದಾರೆ. ಸರಕಾರದಿಂದ ಸೂಕ್ತ ಹಾಗೂ ಧನಾತ್ಮಕ ಸ್ಪಂದನೆ ದೊರೆಯದಿದ್ದಲ್ಲಿ, ಯಾವುದೇ ಕ್ಷಣದಲ್ಲಿ ಜೈಲ್ ಭರೋ ಚಳವಳಿಗೆ ಧುಮುಕಲು ಸನ್ನದ್ಧರಾಗಿರುವುದಾಗಿ ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!