Athani

ಖಿಳೇಗಾಂವ ಬಸವಣ್ಣ ಕ್ಷೇತ್ರದಲ್ಲಿ ದೇವರೆತ್ತಿಗೆ ಬೆಂಕಿ ಹಚ್ಚಿದ ಶಂಕೆ; ಮೂಕ ಪ್ರಾಣಿ ಮೇಲೆ ಅಮಾನವೀಯ ಕೃತ್ಯಕ್ಕೆ ಆಕ್ರೋಶ

Share

ಅಥಣಿ ಸುಕ್ಷೇತ್ರ ಖಿಳೇಗಾಂವ ಬಸವಣ್ಣ ಕ್ಷೇತ್ರದಲ್ಲಿ ದೇವರೆತ್ತು (ಗೂಳಿ) ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಅಥವಾ ಆಸಿಡ್ ಸುರಿದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಎತ್ತಿನ ದೇಹದ ಕೆಲ ಭಾಗಗಳು ತೀವ್ರವಾಗಿ ಸುಟ್ಟು, ಮೂಕ ಪ್ರಾಣಿ ನೋವಿನಿಂದ ನರಳುತ್ತಿರುವ ದೃಶ್ಯ ಸ್ಥಳೀಯರ ಮನಕಲಕಿದೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ಗಾಯಗೊಂಡ ದೇವರೆತ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಅದರ ಆರೈಕೆಗೆ ಮುಂದಾಗಿದ್ದಾರೆ. ದೇವರೆಂದೇ ಭಕ್ತಿಯಿಂದ ಪೂಜಿಸುವ ಮೂಕ ಪ್ರಾಣಿಯ ಮೇಲೆ ಇಂತಹ ಕ್ರೌರ್ಯ ಎಸಗಿರುವುದು ಪ್ರಾಣಿಪ್ರಿಯರು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮಾತನಾಡಲು ಸಾಧ್ಯವಾಗದ ಮೂಕ ಪ್ರಾಣಿಯ ಮೇಲೆ ಇಂತಹ ಅಮಾನವೀಯ ಕೃತ್ಯ ಎಸಗಿದವರು ಯಾರು? ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ? ನಿಜವಾಗಿಯೂ ಪೆಟ್ರೋಲ್ ಅಥವಾ ಆಸಿಡ್ ಸುರಿದು ಬೆಂಕಿ ಹಚ್ಚಲಾಗಿದೆಯೇ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ದೇವರೆತ್ತಿನ ಮೇಲೆ ಕ್ರೌರ್ಯ ಎಸಗಿದವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!