Hukkeri

ಹುಕ್ಕೇರಿ : ಕನ್ನಡದ ಜೊತೆಗೆ ನಾವೆಲ್ಲರೂ ಸಾಗೋಣ – ಹುಕ್ಕೇರಿ ಚಂದ್ರಶೇಖರ ಮಹಾಸ್ವಾಮಿಗಳು.

Share

ಕರ್ನಾಟಕದ ಕನ್ನಡದ ಜೊತೆಗೆ ನಾವೆಲ್ಲರೂ ಸಾಗೋಣ ಎಂದು ಹುಕ್ಕೇರಿ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.
ಅವರು ಇಂದು ಹುಕ್ಕೇರಿ ನಗರದಲ್ಲಿ ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದರು.
ಪಟ್ಟಣದ ಎಸ್ ಕೆ ಹೈಸ್ಕೂಲ್ ಮೈದಾನದಲ್ಲಿ ತಾಲೂಕಾ ದಂಢಾದಿಕಾರಿ ಬಲರಾಮ ಕಟ್ಟಿಮನಿ ರಾಷ್ಟ್ರ ದ್ವಜ ಹಾರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.

ಮಾದ್ಯಮಗಳೊಂದಿಗೆ ಮಾತಮಾಡಿದ ತಹಸಿಲ್ದಾರರು ಗಡಿ ಭಾಗದ ಕನ್ನಡ ಶಾಲೆಗಳ ಉಳುವಿಗಾಗಿ ನಾವೆಲ್ಲರೂ ಶ್ರಮ ವಹಿಸ ಬೇಕಾಗಿದೆ ಎಂದರು
ನಂತರ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅದ್ಯಕ್ಷ ಪ್ರಕಾಶ ಅವಲಕ್ಕಿ ಮತ್ತು ಶಿವಾನಂದ ಮಠದ ಮಂಜುನಾಥ ಮಹಾರಾಜರು ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ವಿವಿಧ ಶಾಲಾ ರೂಪಕಗಳ ಮೇರವಣೆಗೆಗೆ ಚಾಲನೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಶೇಖರ ಮಹಾಸ್ವಾಮಿಗಳು ಇಡಿ ವಿಶ್ವವೇ ಇಂದು ಕರ್ನಾಟಕವನ್ನು ಗಮನಿಸುತ್ತಿದೆ ಕನ್ನಡ ನಾಡಿನ ಸಂಸ್ಕೃತ ಇಡಿ ಜಗತ್ತಿಗೆ ಮಾದರಿಯಾಗಿದೆ ,ಕನ್ನಡದ ಜೋತೆಗೆ ಸಾಗೋಣ ಎಂದರು

ನಂತರ ವಿವಿಧ ಶಾಲಾ ಮಕ್ಕಳ ರೂಪಕಗಳು ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಮಾವೇಶ ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಇಓ ಮಲ್ಲಾಡದ ಟಿ ಆರ್, ಗ್ರೇಡ ೨ ತಹಸಿಲ್ದಾರ ಪ್ರಕಾಶ ಕಲ್ಲೋಳ್ಳಿ, ಬಿ ಇ ಓ ರೇವತಿ ಮಠದ, ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಅವುಜಿ, ಲೋಕೋಪಯೋಗಿ ಅಭಿಯಂತರ ಪ್ರವಿಣ ಮಾಡ್ಯಾಳ , ಕೃಷಿ ಇಲಾಖೆ ಅಧಿಕಾರಿ ಮಹಾದೇವ ಪಟಗುಂದಿ, ಸಮಾಜ ಕಲ್ಯಾಣ ಅಧಿಕಾರಿ ಗುರುಶಾಂತ ಪಾವಟೆ, ಬಸವರಾಜ ನಾಂದೂಡಕರ, ಮುಖಂಡರಾದ ಉದಯ ಹುಕ್ಕೇರಿ, ಎ ಕೆ ಪಾಟೀಲ, ತಮ್ಮಣ್ಣಾ ಪಾಟೀಲ, ಕಬೀರ ಮಲ್ಲಿಕ, ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ..

Tags:

error: Content is protected !!