bagalkot

ದೊಡ್ಡಿಯಲ್ಲಿದ್ದ ಕುರಿ- ಮೇಕೆ ಕಳ್ಳತನ..

Share

ಅವ್ರು ಜೀವನೋಪಾಯಕ್ಕೆ ಕುರಿ-ಮೇಕೆ ಸಾಕಾಣಿಕೆ ಮಾಡಿಕೊಂಡವ್ರು.ಅವ್ರ ಕುರಿ-ಮೇಕೆಗಳನ್ನೇ ಪದೆ-ಪದೆ ಕಳ್ಳತನವಾಗ್ತಿವೆ.ಇದ್ರಿಂದ ಹತಾಶಯಗೊಂಡ ರೈತ ಕುರಿ-ಮೇಕೆ ಶೆಡ್ ಗೆ ಸಿಸಿ ಟಿವಿ ಅಳವಡಿಸಿದ್ದಾನೆ. ಆದ್ರೂ ಕಳ್ಳರು ತಮ್ಮ ಕೈಚಳಕ ತೋರಿ ಮೇಕೆ ಕದ್ದು ಪರಾರಿಯಾಗಿದ್ದಾರೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ….

ಒಂದೆಡೆ ಶೆಡ್ ನ ತಂತಿ ಬೇಲಿ ಕಟ್ ಮಾಡಿ ಮೇಕೆ ಕಳ್ಳತನ ಮಾಡಿದ ಖಧೀಮರು.ಮತ್ತೊಂದೆಡೆ ಮೇಕೆ ಕಳೆದುಕೊಂಡ ಮಾಲೀಕನ ಆಕ್ರೋಶ.ಇಂತಹ ದೃಶ್ಯ ಕಂಡು ಬರೋದು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ.ಹೌದು ಯಲ್ಲಟ್ಟಿ ಗ್ರಾಮದಲ್ಲಿ ಕುರಿ-ಮೇಕೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಶಶಿಕಾಂತ್ ಬಜಂತ್ರಿ ಅವ್ರ ಕುರಿ ದೊಡ್ಡಿಯಲ್ಲಿದ್ದ ಮೇಕೆಗಳನ್ನೇ ಹೊತ್ತೊಯ್ದಿದ್ದಾರೆ.ಕೈಯಲ್ಲಿ ಕೊಡಲಿ ಹಿಡಿದು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಕಳ್ಳರು ದೊಡ್ಡಿ ಹೊಕ್ಕಿ ಮೇಕೆಗಳನ್ನು ಕಳ್ಳತನ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ…

ಇನ್ನು ಶಶಿಕಾಂತ್ ಬಜಂತ್ರಿ ಅವ್ರ ದೊಡ್ಡಿಯಲ್ಲಿ ನಡೆದ ಮೇಕೆ ಕಳ್ಳತ ಇದು ಮೊದಲನೇದಲ್ಲ,ಮೂರ್ನಾಲ್ಕು ಬಾರಿ ಕುರಿ-ಮೇಕೆ ಕಳ್ಳತನವಾಗಿವೆ. ರೈತ ಕಂಗಾಲಾಗಿದ್ದಾನೆ.ಪಕ್ಕದ ತೋಟದಲ್ಲಿರುವ ವ್ಯಕ್ತಿಯೇ ಈ ಕಳ್ಳತನ ಮಾಡಿದ್ದಾನೆ ಎಂದು ಶಶಿಕಾಂತ ಭಜಂತ್ರಿ ಆರೋಪಿಸಿದ್ದಾರೆ. ಈ ಕುರಿತು ರಬಕವಿ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಕುರಿ ಮೇಕೆ ಕಳ್ಳರ ಗ್ಯಾಂಗ್ ಸಕ್ರಿಯವಾಗಿದ್ದು, ರಾತ್ರಿ ವೇಳೆ ದೊಡ್ಡಿಗಳಿಗೆ ನುಗ್ಗಿ ಕುರಿ ಮೇಕೆ ಕದ್ದು ಪರಾರಿಯಾಗುತ್ತಿದ್ದಾರೆ. ಪೊಲೀಸರು ಕೂಡಲೇ ಗಸ್ತು ಹೆಚ್ಚಿಸಿ ಕಳ್ಳರನ್ನು ಬಂಧಿಸಬೇಕು ಎಂಬುವುದು ರೈತರ ಆಗ್ರಹ…

Tags:

error: Content is protected !!