ಪ್ಲಾಟ್ಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿ, ಗನ್ ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪ ಹುಬ್ಬಳ್ಳಿಯ ಸೆಟ್ಲ್ಮೆಂಟ್ ಪ್ರದೇಶದಲ್ಲಿ ಕೇಳಿಬಂದಿದೆ.
ಮಹಮ್ಮದ್ಗೌಸ್ ಬಾಬುಸಾಬ ಚನ್ನಾಪುರ ಅವರು ಎಲೈಟ್ ಡೆವಲಪರ್ಸ್ ಮತ್ತು ಬಿಲ್ಡರ್ಸ್ನಿಂದ 600 ಚದರ ಅಡಿ ವಿಸ್ತೀರ್ಣದ ಪ್ಲಾಟ್ ಖರೀದಿಸಿದ್ದರು ಎನ್ನಲಾಗಿದೆ. ಈ ಪ್ಲಾಟ್ಗೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ನೋಟಿಸ್ ಬಂದಿತ್ತು.

ಈ ವಿಚಾರವಾಗಿ ಪ್ರಕಾಶ ದಾಸರೆಡ್ಡಿ ಹಾಗೂ ಮಿಥುನ ಜಾಧವ ಎಂಬವರು, ಎಲೈಟ್ ಡೆವಲಪರ್ಸ್ ಮತ್ತು ಬಿಲ್ಡರ್ಸ್ ವಿರುದ್ಧ ದೂರು ನೀಡುವಂತೆ ಒತ್ತಾಯಿಸಿ, ಪ್ಲಾಟ್ನ ದಾಖಲೆಗಳನ್ನು ಕೇಳಿದ್ದರು ಎನ್ನಲಾಗಿದೆ. ಆದರೆ ದಾಖಲೆ ನೀಡಲು ಮಹಮ್ಮದ್ಗೌಸ್ ನಿರಾಕರಿಸಿದ್ದರು ಎನ್ನಲಾಗಿದೆ.
ಜುಲೈ 27, 2026ರಂದು ಬೆಳಿಗ್ಗೆ 10.30ರಿಂದ 10.45ರ ಸುಮಾರಿಗೆ ಮಹಮ್ಮದ್ಗೌಸ್ ತಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ಹುಬ್ಬಳ್ಳಿಯ ಸೆಟ್ಲ್ಮೆಂಟ್ನ ಕುವೆಂಪು ವೃತ್ತದ ಬಳಿ ಕಾರಿನಲ್ಲಿ ಬಂದ ಆರೋಪಿಗಳು ಅವರ ವಾಹನವನ್ನು ತಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಪ್ರಕಾಶ ದಾಸರೆಡ್ಡಿ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರು ನೀಡಿ ಮೂರು ದಿನ ಕಳೆದರೂ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ತಗೊಳ್ತಾ ಇಲ್ಲ ಎಂದು ದೂರುದಾರ ಆರೋಪಿಸಿದ್ದಾನೆ
ಬೈಟ್: ಮಹಮ್ಮದ್ಗೌಸ್ – ದೂರುದಾರ
