Chikkodi

ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ‘ಕರ್ನಾಟಕ ಬಂದ್‌’: ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗೂರುಜಿ ಎಚ್ಚರಿಕೆ

Share

ಕಬ್ಬು ಬೆಳೆಗಾರರ ಸುದೀರ್ಘ ಹೋರಾಟ ಹಾಗೂ ನ್ಯಾಯಯುತ ಬೆಲೆ ನೀಡುವ ವಿಷಯದಲ್ಲಿ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ಸತತ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಖಂಡಿಸಿ, ರೈತ ಸಂಘದ ಗೌರವಾಧ್ಯಕ್ಷರಾದ ಶಶಿಕಾಂತ ಗೂರುಜಿ ಅವರು ಸರ್ಕಾರಕ್ಕೆ ತೀವ್ರ ಎಚ್ಚರಿಕೆಯನ್ನು ನೀಡಿದ್ದಾರೆ.

​ಗುರ್ಲಾಪೂರದಲ್ಲಿ ರೈತರ ಹೋರಾಟದಲ್ಲಿ ಮಾತನಾಡಿ ಅವರುಶಶಿಕಾಂತ ಗೂರುಜಿ ಅವರು ಮಹಾರಾಷ್ಟ್ರ ಮಾದರಿಯಲ್ಲಿ ನಮ್ಮ ರಾಜ್ಯದ ಕಬ್ಬು ಬೆಳೆಗಾರರಿಗೂ ನ್ಯಾಯಯುತ ಬೆಲೆ ಸಿಗಬೇಕು. ಪ್ರತಿ ಬಾರಿ ಕಬ್ಬು ಬೆಳೆಗಾರರಿಗೆ ಮೋಸವಾಗುತ್ತಲೇ ಬಂದಿದೆ. ಸಂಜೆ ಸರ್ಕಾರದ ಮಟ್ಟದಲ್ಲಿ ನಡೆಯಲಿರುವ ಸಭೆಯಲ್ಲಿ ಕಬ್ಬು ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ಗಂಭೀರ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

​ಕಬ್ಬಿಗೆ ಸೂಕ್ತ ಬೆಲೆಯನ್ನು ನಿಗದಿಪಡಿಸಬೇಕು ಹಾಗೂ ಯಾವುದೇ ಕಾರಣಕ್ಕೂ ರೈತರಿಗೆ ಅಸಮಾಧಾನವಾಗುವಂತಹ ಉತ್ತರ ನೀಡಬಾರದು.ಇಂದು ಸಂಜೆಯೊಳಗೆ ಸರ್ಕಾರ ಸೂಕ್ತ ಹಾಗೂ ದಿಟ್ಟ ನಿರ್ಧಾರ ಕೈಗೊಳ್ಳದಿದ್ದರೆ, ರಾತ್ರಿ 8 ಗಂಟೆಗೆ ವೇದಿಕೆ ಮೇಲಿಂದಲೇ ಅಧಿಕೃತ ಘೋಷಣೆ ಮಾಡಿ, ನಾಳೆ ಸಂಪೂರ್ಣ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು.

​ಸರ್ಕಾರ ಸ್ಪಂದಿಸದಿದ್ದಲ್ಲಿ‌‌ ದಿನಾಂಕ 28ರಂದು ಪಕ್ಷಾತೀತವಾಗಿ ರಾಜ್ಯದ ಎಲ್ಲಾ 224 ಶಾಸಕರ ಮನೆಗಳ ಮುಂದೆ ಸಾವಿರಾರು ಸಂಖ್ಯೆಯಲ್ಲಿ ರೈತರು ತೆರಳಿ, ಹಲಿಗಿ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಗುವುದು.
ನಾವು ಸಮಾಧಾನದಿಂದ ಕಾಯುತ್ತಿದ್ದೇವೆ.ಆದರೆ ರೈತರ ಶಕ್ತಿ ಏನೆಂಬುದನ್ನು ತೋರಿಸುವ ಸಮಯ ಬಂದಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ವಿಶ್ರಮಿಸುವುದಿಲ್ಲ ಎಂದು ಗೂರುಜಿ ಅವರು ಎಚ್ಚರಿಕೆಯನ್ನು ನೀಡಿದರು.

Tags:

error: Content is protected !!