ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಮರಾಠ ಮಂಡಲ ಭವನದಲ್ಲಿ ಬರುವ ನಾಳೆ ರವಿವಾರ ಬೆಳಿಗ್ಗೆ 11 ಗಂಟೆಗೆ ತಾಲೂಕು ಮರಾಠ ಸಮಾಜದ ವತಿಯಿಂದ ಬೃಹತ್ ಸಮಾವೇಶ ಹಾಗೂ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ತಾಲೂಕು ಮರಾಠ ಸಂಘದ ಅಧ್ಯಕ್ಷ ಬಿ.ಆರ್. ಯಾದವ್ ತಿಳಿಸಿದ್ದಾರೆ.
ಅಂಕಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ವೇಳೆ ತಾಲೂಕಿನ ಮರಾಠ ಸಮಾಜದ ವತಿಯಿಂದ ಸಚಿವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್ ಅವರು ಮರಾಠ ಸಮುದಾಯದ ಬಾಂಧವರಿಗೆ ವಿಶೇಷ ಮಾರ್ಗದರ್ಶನ ನೀಡಲಿದ್ದಾರೆ. ಆದ್ದರಿಂದ ಚಿಕ್ಕೋಡಿ ತಾಲೂಕಿನ ಪ್ರತಿಯೊಂದು ಗ್ರಾಮದ ಮರಾಠ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅವರು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ರಾಮಾ ಮಾನೆ, ಅನಿಲ್ ಮಾನೆ, ರಂಜಿತ್ ಶಿರಸೇಟೆ, ಅನಿಲ್ ಪಾಟೀಲ್, ಬಾಳಸಾಹೇಬ್ ಪಾಟೀಲ್, ಅಜಯ್ ಸೂರ್ಯವಂಶಿ, ಅಣ್ಣಾಸಾಹೇಬ್ ಪವಾರ್, ಯುವರಾಜ್ ಕದಮ್, ಜಯರಾಜ್ ಹಲಗೆಕರ್, ಯುವರಾಜ್ ಶೆಂಡುರೆ,ಡಾ! ಮಾಂಜರಿಯ ಡಾ! ಮಾನೆ ಸೇರಿದಂತೆ ಸಮಾಜದ ಹಲವು ಪ್ರಮುಖರು ಉಪಸ್ಥಿತರಿದ್ದರು.
