Khanapur

ಶ್ರೀ ವಿಠ್ಠಲ ರುಕ್ಮಿಣಿ ಮಂದಿರ ನಿರ್ಮಾಣಕ್ಕೆ ರೂ. 1 ಲಕ್ಷ ನೆರವು ನೀಡಿದ ಅರವಿಂದ್ ಪಾಟೀಲ್

Share

ಖಾನಾಪುರ ತಾಲೂಕಿನ ಕಾಪೋಲಿ (ಜಾಬೋಟ್ಟಿ) ಗ್ರಾಮದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದ ನಿರ್ಮಾಣಕ್ಕೆ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡಿದ್ದಾರೆ. ಮಂದಿರ ಕಮಿಟಿಯ ಪದಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸುವ ಮೂಲಕ ದೇವಾಲಯದ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.

ಖಾನಾಪುರ ತಾಲೂಕಿನ ಪ್ರಸಿದ್ಧ ಕಾಪೋಲಿ (ಜಾಬೋಟ್ಟಿ) ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದ ಕಟ್ಟಡ ಕಾಮಗಾರಿಗೆ ಧಾರ್ಮಿಕ ಮತ್ತು ಸಾಮಾಜಿಕ ಬೆಂಬಲ ವ್ಯಕ್ತವಾಗಿದೆ. ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರವಿಂದ್ ಪಾಟೀಲ್ ಅವರು ಮಂದಿರದ ನಿರ್ಮಾಣ ಕಾರ್ಯಕ್ಕಾಗಿ ₹1,00,000 (ಒಂದು ಲಕ್ಷ ರೂಪಾಯಿ) ಆರ್ಥಿಕ ನೆರವು ಘೋಷಿಸಿ, ಅದಕ್ಕೆ ಸಂಬಂಧಿಸಿದ ಚೆಕ್ ಅನ್ನು ಮಂದಿರ ಕಮಿಟಿಯ ಪ್ರಮುಖ ಪದಾಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧಾರ್ಮಿಕ ಕೇಂದ್ರಗಳು ಸಮಾಜದಲ್ಲಿ ಶಾಂತಿ, ಭಾವೈಕ್ಯತೆ ಮತ್ತು ಸದ್ಭಾವನೆಯನ್ನು ಬೆಳೆಸುವ ಕೇಂದ್ರಗಳಾಗಿದ್ದು, ಇಂತಹ ಪವಿತ್ರ ಕಾರ್ಯಕ್ಕೆ ಕೈಜೋಡಿಸಲು ಸಂತಸವೆನಿಸುತ್ತದೆ ಎಂದರು. ಗ್ರಾಮಸ್ಥರು ಹಾಗೂ ದೇವಾಲಯ ಕಮಿಟಿಯ ಪದಾಧಿಕಾರಿಗಳು ಅರವಿಂದ್ ಪಾಟೀಲ್ ಅವರ ಈ ಉದಾರ ಧನಸಹಾಯಕ್ಕೆ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಸಲ್ಲಿಸಿದರು.

Tags:

error: Content is protected !!