Dharwad

ಎಥನಾಲ್ ಬಗ್ಗೆ ಈ ದೇಶದಲ್ಲಿ ಕ್ಲಿಯರೀಟಿ ಇಲ್ಲ, ಚರ್ಚೆಯಾಗಬೇಕು – ಲಾಡ್

Share

ಕಬ್ಬು ಬೆಳಗಾರರ ಹೋರಾಟ ದೊಡ್ಡ ಮಟ್ಟಿಗೆ ಆಗಿದೆ, ರೈತರು ಎರಡು ಸರ್ಕಾರಕ್ಕೆ ಬೇಡಿಕೆಗಳನ್ನು ಇಟ್ಟಿದ್ದಾರೆ. ಆದರೆ ಎಥನಾಲ್ ಬಗ್ಗೆ ಈ ದೇಶದಲ್ಲಿ ಕ್ಲಿಯರೀಟಿ ಇಲ್ಲದಾಗಿದೆ. ಎಷ್ಟು ಉತ್ಪಾದನೆ, ಎಷ್ಟು ಖರೀದಿ ಏನ್ ಪ್ರೈಸ್ ಹೋಗತ್ತಿದೆ ಅಂತಾ ಕ್ಲಿಯರೀಟಿ ಇಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು. ‌

ಧಾರವಾಡದಲ್ಲಿ ಈ ಕುರಿತು ಮಾತನಾಡಿದ ಅವರು, ಎಥನಾಲ್ ಪಾಲಿಸಿ 2014 ರಲ್ಲಿ ತರಲಾಯಿತು. ಈಗ 2026 12 ವರ್ಷ ಪಾಲಿಸಿಯಲ್ಲಿ ಏನ್ ಬದಲಾವಣೆ ಸೇರಿ ಪಾಲಿಸಿ ಬಗ್ಗೆ ಸ್ಪಷ್ಟತೆ ಇಲ್ಲದಾಗಿದೆ. ಈ‌ ಬಗ್ಗೆ ಒಮ್ಮೆ ಚರ್ಚೆಯಾಗಬೇಕು, ಎಥೆನಾಲ್ ಬಗ್ಗೆ ದೇಶದಲ್ಲಿ ಸ್ಪಷ್ಟತೆ ಇಲ್ಲಾ. ಎಷ್ಟು ಉತ್ಪಾದನೆಯಾಗಿದೆ, ಎಷ್ಟು ಬಳಕೆ ಮಾಡಿದ್ದೆವೆ. ನಾವು ಅಮೇರಿಕಾದಿಂದ ೫೦ ಮಿಲಿಯನ್ ಬ್ಯಾರಲ್ ಆಮದು ಮಾಡಿದ್ದೆವೆ. ಅದು ಎಲ್ಲಿ‌ ಬಳಕೆಯಾಗಿದೆ, 56 ರಿಂದ 58 ರೂಗೆ ನಾವು ಖರೀದಿ ಮಾಡ್ತೆವೆ. ಸರ್ಕಾರ ಅದನ್ನ ತಗೊತಿದೆ ,ರೈತರಿಂದಲೇ ಎಥೆನಾಲ್ ಆಗೊದು, ಎಥೆನಾಲ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ರೈತರಿಗೆ ಐದಾರು‌ ರೂಪಾಯಿ ಕೊಟ್ಟರೆ‌ ಆಗುತ್ತಲ್ವಾ, ಅದಕ್ಕೆ ಸ್ಪಷ್ಟೀಕರಣ ಬೇಕಲ್ಲ. ದೇಶದಲ್ಲಿ ಎಷ್ಟು ಉತ್ಪಾದನೆ ಇದೆ, ಎಷ್ಟು ಬೇಕಾಗಿದೆ ಎಂದು ಬೇಕು, ಇವತ್ತು ಎಫ್‌ಆರ್‌ಪಿ ಮತ್ತು ಎಂಎಸ್‌ಪಿ‌ ಕೇಳುತಿದ್ದಾರೆ. ಇದನ್ನ‌ ಯಾರು ಸೆಟ್ ಮಾಡಬೇಕು. 10 ಲಕ್ಷ ಟನ್ ಶುಗರ್ ಆಮದು ಮಾಡಿದ್ರು, ಯಾರು ಉತ್ತರ ಕೊಡಬೇಕು ಇದಕ್ಕೆ, 40 ರೂಪಾಯಿ ಸಕ್ಕರೆ 70ಕ್ಕೇ ಹೊಯ್ತು ಯಾರು ಯೋಚನೆ ಮಾಡಲಿಲ್ಲ. ಕಾರಣ ಏನು, ಸಕ್ಕರೆ ಉತ್ಪಾದನೆ ಬಗ್ಗೆ ಕಂಟ್ರೊಲ್ ಮಾಡೊರು‌ ಯಾರು, ಕೇಂದ್ರ ಸರ್ಕಾರನೇ ಕಂಟ್ರೋಲ್ ಮಾಡಬೇಕು. ಆಮದು ಕೂಡಾ ಕೇಂದ್ರ ಮಾಡೊದು. ಎಥೆನಾಲ್ ಸಕ್ಕರೆ ಏನು ಎಂತಾ ಎಂದು ಕೇಂದ್ರಕ್ಕೆ ಗೊತ್ತಿರುತ್ತದೆ. ಮೋದಿ ಅವರು ಸಕ್ಕರೆ ದರ ಹೆಚ್ಚಾಗಿದೆ, ಹಬ್ಬಕ್ಕೆ ಸಕ್ಕರೆ ಬಳಸಬೇಡಿ ಎಂದು‌ ಹೇಳಬೇಕಿತ್ತಲ್ಲಾ. ದೇಶಕ್ಕಾಗಿ ಚಿನ್ನ ಖದೀರಿ ಬೇಡಾ, ದೇಶಕ್ಕಾಗಿ ಹೊರ‌ದೇಶಕ್ಕೆ‌‌ ಹೋಗಬೇಡಿ, ದೇಶಕ್ಕಾಗಿ ಪೆಟ್ರೋಲ್ ಕಡಿಮೆ ಬಳಸಿ, ಇವರು ಎಷ್ಟೇ ದರ ಮಾಡಲಿ. ಎಲ್ಲ ದೇಶಕ್ಕೆ ಹೇಳೊದು, ದೇಶ‌ ನಡೆಸೊದೆ ಇವರು, ಯಾರಿಗೆ ಅನಾನುಕೂಲ ಆದರೆ ಬೇರೆಯವರ ಬಗ್ಗೆ ಹೇಳೊದು, ಯಾರು ಉತ್ತರ ಕೊಡೊರು. ಈ ರೇಟಿಗೆ ಕಬ್ಬು ಖದೀರಿ ಮಾಡಬೇಕು ಎಂದು ಹೇಳೊರು ಯಾರು, ರಾಜ್ಯ ಸರ್ಕಾರಕ್ಕೆ ಮಿನಿಮಮ್ ಸೆಲ್ಲಿಂಗ್‌ನಲ್ಲಿ ಏನು ಸಂಬಂಧ, ದರ ನಿಗದಿ ಮಾಡೊದು ಕೇಂದ್ರ ಸರ್ಕಾರ, ನಾವು ಆರು ಸಾವಿರ ಕೋಟಿ ಲೀಟರ್ ಪೆಟ್ರೋಲ್ ಬಳಸ್ತೆವಿ, ಎಥೆನಾಲ್ 20% ಬಳಸಬೇಕು ಅನ್ನೊರು ಇವರೇ ಎಥೆನಾಲ್ 55ರೂ‌ಗಳಿಗೆ ಖದೀರಿ ಮಾಡ್ತಿದಾರೆ. ಪೆಟ್ರೋಲ್ 110 ಕ್ಕೆ ಮಾರಾಟ ಮಾಡ್ತಾರೆ. ನಾವು ಖದೀರಿ ಮಾಡೊ ಪೆಟ್ರೋಲ್ ನಲ್ಲಿ ಎಥೆನಾಲ್ ಇದೆ, ಇದರ ಲಾಭ ಯಾರಿಗೆ ಅಗುತ್ತಿದೆ. ರೈತರ ಕಬ್ಬು ಕಾರ್ಖಾನೆಗೆ‌ ಹೋಗುತ್ತದೆ, ಕಾರ್ಖಾನೆ ಎಥೆನಾಲ್ ತಯಾರಿ ಮಾಡುತ್ತದೆ. ಎಥೆನಾಲ್ ಖದೀರಿ ಮಾಡೊ‌ ಕೇಂದ್ರ ಸರ್ಕಾರ ಲಾಭ ಮಾಡಿಕೊಳ್ತಿದೆ ಈ‌ಹಣ ಯಾರಿಗೆ ಕೊಡಬೇಕು ಎಂದು ಚರ್ಚೆ ಯಾಗಲಿ ಎಂದು ಆಗ್ರಹಿಸಿದರು. ‌

 

Tags:

error: Content is protected !!