Dharwad

ಹಿಂಗಾರು ಸುಭಿಕ್ಷವಾಗಿದೆ, ಮಳೆ ಚೆನ್ನಾಗಿ ಆಗುತ್ತೆ – ಕೋಡಿ ಶ್ರೀ ಭವಿಷ್ಯ

Share

ಪ್ರಸಕ್ತ ವರ್ಷದ ಹಿಂಗಾರು ಬೆಳೆ ಸುಭಿಕ್ಷವಾಗಿದೆ. ಮಳೆ ಚೆನ್ನಾಗಿ ಆಗುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಧಾರವಾಡದಲ್ಲಿ ಮಾತನಾಡಿರುವ ಅವರು, ಮುಂಗಾರು ಮಳೆ ಆಗುವುದಿಲ್ಲ, ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ, ಅನ್ನಕ್ಕೆ ಕೊರತೆಯಾಗುತ್ತದೆ, ಜನ ಅಸುನೀಗುತ್ತಾರೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದೆ. ಅದೇ ಪ್ರಕಾರ ಆಗಿದೆ. ಆದರೆ, ಈ ಬಾರಿ ಹಿಂಗಾರು ಮಳೆಯಾಗಲಿದೆ. ಜನರಿಗೆ ಸುಭಿಕ್ಷೆ ಮತ್ತು ನೆಮ್ಮದಿ ಸಿಗಲಿದೆ. ಜಲಚರಗಳಿಗೆ ಒಳ್ಳೆಯದಾಗಲಿದೆ ಎಂದರು. ಜತೆಗೆ ಅಖಂಡ ಕರ್ನಾಟಕ ಒಂದಾಗಿ ಹೋಗಬೇಕು. ಇದು ಆಗಬೇಕಾದರೆ ಸಾಹಿತ್ಯಕ, ಸಾಂಸ್ಕೃತಿಕ ನೆಲೆಗಟ್ಟು, ಜನ ಜೀವನ, ಮಳೆ, ಬೆಳೆ ಚೆನ್ನಾಗಿ ಆಗಬೇಕು. ಆ ದೃಷ್ಟಿಯಿಂದ ಇಂದು ಧಾರವಾಡ ಜಂಬೂ ಸವಾರಿ ನಡೆಯುತ್ತಿದೆ. ಇದು ಅಖಂಡ ರಾಜ್ಯದ ಸಂಸ್ಕೃತಿಯ ಪ್ರತೀಕ. ಮೈಸೂರಿನಲ್ಲಿ ಒಂದು ಹಾಗೂ ಉತ್ತರ ಕರ್ನಾಟಕದಲ್ಲಿ ಈ ಜಂಬೂ ಸವಾರಿಗಳು ಏಕತಾ ಮನೋಭಾವದ ಸಂದೇಶ ನೀಡುತ್ತಿವೆ. ವರ್ಷದಿಂದ ವರ್ಷಕೆ, ಮನುಷ್ಯನ ಜೀವನ ಉಚವಾಗಿದೆ. ಮನುಷ್ಯ ಮನುಷ್ಯನಾಗಿ ಬಾಳಬೇಕಾದರೆ ನಮ್ಮ ಹಿರಿಯರ ಆದರ್ಶ ಮುಖ್ಯವಾದದ್ದು. ಆ ಆದರ್ಶದ ಸಂಕೇತವೇ ಈ ದಸರಾ ಕಾರ್ಯಕ್ರಮ ಎಂದರು. ಇನ್ನೂ ರಾಜ್ಯ ರಾಜಕಾರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಅದರ ಬಗ್ಗೆ ನನಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ. ದೈವ ಕೃಪೆ ಎಲ್ಲರಿಗೂ ಆಗಲಿ. ನಮಗೆ ಬೇಕಾಗಿದ್ದು ಮಳೆ ಬೆಳೆ. ರೋಗ ರುಜಿನಗಳು ದೂರಾಗಿ ಮನುಷ್ಯನಿಗೆ ನೆಮ್ಮದಿ ಬರಬೇಕು, ಶಾಂತಿ ಬರಬೇಕು ಎಂದು ಹೇಳಿದರು.

Tags:

error: Content is protected !!