Dharwad

ಧಾರವಾಡದ ಯರಿಕೊಪ್ಪ ತಲುಪಿದ ಕಬ್ಬು ರೈತರ ಪಾದಯಾತ್ರೆ….ಯರಿಕೊಪ್ಪದಲ್ಲಿ ರೈತರ ಪ್ರಮುಖರ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಸಲಿರೋ ಮುಖಂಡರು.‌

Share

ಕಬ್ಬಿನ‌‌ ಎಂಎಸ್‌ಪಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಿಂದ ಹುಬ್ಬಳ್ಳಿವರೆಗೂ ರೈತರು ನಡೆಸುತ್ತಿರುವ ಪದಯಾತ್ರೆಯು ಭಾನುವಾರ ಧಾರವಾಡ ತಲುಪ್ಪಿದ್ದು, ಇಂದು ಧಾರವಾಡ ಯರಿಕೊಪ್ಪದ ಧರಣಿ ವೇದಿಕೆ ತಲುಪಿದೆ. ಬಹುತೇಕ ಪದಯಾತ್ರೆಯನ್ನು ಯರಿಕೊಪ್ಪ ಬಳಿ ರೈತರು ಕೈ ಬೀಡುವ ಸಾಧ್ಯತೆ ಇದ್ದು, ಮುಂದಿನ‌ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ಮಾಡಲು ಯರಿಕೊಪ್ಪ ಧರಣಿ ವೇದಿಕೆಯಲ್ಲಿ ರೈತರು ಸೇರಿಲಿದ್ದಾರೆ.

ಧಾರವಾಡದ ತೇಗೂರಿನಿಂದ ಪದಾಯಾತ್ರೆಯ ಈಗ ಯರಿಕೊಪ್ಪ ಬಳಿಯ ರೈತರ ಧರಣಿ ಮಾಡುತ್ತಿರುವ ಸ್ಥಳಕ್ಕೆ ತಲುಪಿದೆ. ಕಳೆದ ದಿನ ತಡೆ ರಾತ್ರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ರೈತ ಹೋರಾಟಗಾರರಾದ ಚೂನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಸೇರಿ ಹತ್ತು ಜನ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ರೈತರಿಗೆ ಪಾದಯಾತ್ರೆ ಕೈ ಬೀಡುವಂತೆ ಮನವಿ‌ ಮಾಡುವುದರ ಜತೆಗೆ ಬೇಡಿಕೆ ಈಡೇರಿಗೆ ಸ್ಪಂದಿಸುವುದಾಗಿ ಸಮಯ ಕೇಳಿ ಭರವಸೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ನೀಡಿದ್ದಾರೆ. ಸಭೆಯಲ್ಲಿ ಚೂನ್ನಪ್ಪ ಪೂಜಾರಿಯವರ ನೇತೃತ್ವದ ತಂಡ ಸಮಯ‌ ನೀಡುತ್ತೇವೆ ಎಂದು ಭರವಸೆ ನೀಡಿ, ಅಂತಿಮವಾಗಿ ನಿರ್ಧಾರವನ್ನು ರೈತ ಪ್ರಮುಖರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.‌ ಈ ಹಿನ್ನಲೆಯಲ್ಲಿ ಈಗ ರೈತ ಮುಖಂಡ ಚೂನ್ನಪ್ಪ ಪುಜಾರಿ, ಶಶಿಕಾಂತ ಗುರೂಜಿಯವರ ನೇತೃತ್ವದ ರೈತ ತಂಡ ಯರಿಕೊಪ್ಪದಲ್ಲಿ ರೈತರ ಸಭೆಗೆ ಕರೆ ನೀಡಿದ್ದು, ಸಭೆಯಲ್ಲಿ ಸಮಾಲೋಚನೆ ಬಳಿಕ ಪಾದಯಾತ್ರೆ ಕೈ ಬೀಡುವ ವಿಚಾರ ಕುರಿತು ನಿರ್ಧಾರ ಪ್ರಕಟ ಮಾಡಲಿದ್ದಾರೆ.‌ ಜತೆಗೆ ಮುಂದಿನ ಕಾರ್ಯತಂತ್ರ ಬಗ್ಗೆ ಇಲ್ಲಿ ಪ್ರಮುಖ ರೈತ ಮುಖಂಡರು ಸಮಾಲೋಚನೆ ಮಾಡಲಿದ್ದಾರೆ

Tags:

error: Content is protected !!