Belagavi

ಉಷಾ ಕಾಲನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 16ನೇ ವರ್ಷದ ನವರಾತ್ರಿ ಮಹೋತ್ಸವ

Share

ಬೆಳಗಾವಿಯ ಉಷಾ ಕಾಲನಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 16ನೇ ವರ್ಷದ ನವರಾತ್ರಿ ಉತ್ಸವ ಶ್ರದ್ಧಾ-ಭಕ್ತಿಯಿಂದ ನಡೆಯುತ್ತಿದೆ.
ಬೆಳಗಾವಿಯ ಬಾಕ್ಸೈಟ್ ರಸ್ತೆಯ ಉಷಾ ಕಾಲೋನಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ 16ನೇ ವರ್ಷದ ದಸರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ. ದಿನಾಂಕ 11-10-2026ರ ರವಿವಾರದಿಂದ 21-10-2026ರ ಬುಧವಾರದವರೆಗೆ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಿತ್ಯವೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ. ಉತ್ಸವದ ಮೊದಲ ದಿನವಾದ ಕಳೆದ ರವಿವಾರ ಅಕ್ಟೋಬರ್ 11ರಂದು ಬೆಳಿಗ್ಗೆ ದೇವಿಗೆ ಮಹಾಅಭಿಷೇಕ, ಗಣಹೋಮ, ಮಧ್ಯಾಹ್ನ ಚಂಡಿಕಾಹೋಮ ಹಾಗೂ ಸಾಯಂಕಾಲ ದೀಪ ಪ್ರಜ್ವಲನೆಯೊಂದಿಗೆ ಘಟಸ್ಥಾಪನೆ ಪ್ರತಿನಿತ್ಯ ಮಧ್ಯಾಹ್ನ ಚಂಡಿಕಾ ಹೋಮ ಹಾಗೂ ತದನಂತರ ದೇವಿಗೆ ಮಹಾಮಂಗಳಾರತಿ ಜರುಗುತ್ತಿವೆ.

ಉತ್ಸವದ ಮುಂಬರುವ ಕಾರ್ಯಕ್ರಮಗಳ ಭಾಗವಾಗಿ ಅಕ್ಟೋಬರ್ 19ರ ಸೋಮವಾರದಂದು ಬೆಳಿಗ್ಗೆ 10:00 ಗಂಟೆಗೆ ವಿಶೇಷ ಕನ್ನಿಕಾ ಪೂಜೆ ನೆರವೇರಲಿದೆ. ಅಂದು ಕಾರಂಜಿ ಮಠದ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಆಗಮಿಸಲಿದ್ದು, ಅವರ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 21ರ ಬುಧವಾರ ಸಾಯಂಕಾಲ 6:30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ, ಶಮಿ ಪೂಜೆ ಹಾಗೂ ಸೀಮೋಲ್ಲಂಘನ ಕಾರ್ಯಕ್ರಮಗಳು ನೆರವೇರಲಿದ್ದು, ತದನಂತರ ರಾತ್ರಿ 7:30ಕ್ಕೆ ಮಹಾಪ್ರಸಾದ ವಿತರಣೆ ಇರಲಿದೆ. ಈ ಸಮಾರಂಭವು ಮುರಗೋಡದ ಶ್ರೀ ಮಹಾಂತ ದುರುದುಂಡೀಶ್ವರ ಮಠದ ಶ್ರೀ ಮ.ನಿ.ಪ್ರ. ನೀಲಕಂಠ ಮಹಾಸ್ವಾಮಿಗಳು ಮತ್ತು ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿದೆ. ದೇವಸ್ಥಾನದ ಅಧ್ಯಕ್ಷ ದೇವಿ ಹಿರೇಮಠ, ಖಜಾಂಚಿ ಸತೀಶ್ ಮಾಳವದೆ, ಹಾಗೂ ಸಮಿತಿಯ ಪ್ರಕಾಶ ಹೆಗಡೆ ಮತ್ತು ನಾಗೇಶ್ ಪಾಟೀಲ್ ಅವರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.

Tags:

error: Content is protected !!