Belagavi

ಏಷ್ಯನ್ ಪ್ಯಾರಾ ಗೇಮ್ಸ್: ಭಾರತೀಯ ತಂಡದ ನೇತೃತ್ವ ವಹಿಸಲಿರುವ ಬೆಳಗಾವಿಯ ಜಯವಂತ್ ಹಮ್ಮಣ್ಣನವರ್

Share

ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತೀಯ ಪ್ಯಾರಾ-ಕ್ರೀಡಾ ತಂಡದ ನೇತೃತ್ವವನ್ನು ಬೆಳಗಾವಿ ಮೂಲದ ಜಯವಂತ್ ಜಿ. ಹಮ್ಮಣ್ಣನವರ್ ವಹಿಸಲಿದ್ದಾರೆ. ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ (ಪಿಸಿಐ) ಪ್ರಧಾನ ಕಾರ್ಯದರ್ಶಿಯಾಗಿರುವ ಇವರ ಈ ಸಾಧನೆ ಬೆಳಗಾವಿ ಹಾಗೂ ಕನ್ನಡಿಗರಿಗೆ ತಂದಿಟ್ಟ ಹೆಮ್ಮೆಯ ಕ್ಷಣವಾಗಿದೆ.

ಜಪಾನ್‌ನ ಐಚಿಯಲ್ಲಿ ನಡೆಯಲಿರುವ ಮುಂಬರುವ ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಭಾರತೀಯ ಪ್ಯಾರಾ-ಕ್ರೀಡಾ ನಿಯೋಗದ ನೇತೃತ್ವವನ್ನು ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ (ಪಿಸಿಐ) ಪ್ರಧಾನ ಕಾರ್ಯದರ್ಶಿ, ಬೆಳಗಾವಿಯ ಬಸವನ ಕುಡಚಿಯ ಜಯವಂತ್ ಜಿ. ಹಮ್ಮಣ್ಣನವರ್ ವಹಿಸಲಿದ್ದಾರೆ. ಹಿಂದೆ ಗೋವಾ ರಾಜ್ಯ ಪ್ಯಾರಾಲಿಂಪಿಕ್ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಜಯವಂತ್ ಅವರು ದೇಶದಲ್ಲಿ ಪ್ಯಾರಾ-ಕ್ರೀಡೆಗಳ ಉತ್ತೇಜನ ಮತ್ತು ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ನೇತೃತ್ವದ ಅವಧಿಯಲ್ಲಿ ಭಾರತೀಯ ಪ್ಯಾರಾ-ಕ್ರೀಡಾಪಟುಗಳು ಪ್ಯಾರಿಸ್ 2024 ರ ಪ್ಯಾರಾಲಿಂಪಿಕ್ಸ್‌ನಲ್ಲಿ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಸ ಒಳಗೊಂಡಂತೆ ಒಟ್ಟು 29 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಗೈದಿದ್ದರು. ಈ ಬಾರಿಯ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲೂ ಭಾರತೀಯ ಕ್ರೀಡಾಪಟುಗಳು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಗರಿಷ್ಠ ಪದಕಗಳನ್ನು ಗೆಲ್ಲಲಿದ್ದಾರೆ ಎಂಬ ಮಹತ್ವಾಕಾಂಕ್ಷೆಯ ನಿರೀಕ್ಷೆಯಿದ್ದು, ಜಯವಂತ್ ಅವರ ಈ ಸಾಧನೆಗೆ ಬೆಳಗಾವಿಯ ಜನತೆ ಹಾಗೂ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.

Tags:

error: Content is protected !!