ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡ ತಾಲೂಕಿನ ಯರಿಕೊಪ್ಪ ಕ್ರಾಸ್ ಬಳಿಯ ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದು ದಿಂಗಾಲೇಶ್ವರ ಶ್ರೀಗಳು ಎಂಟ್ರಿಯಾಗಿದ್ದಾರೆ. ರಸ್ತೆಯಲ್ಲಿ ರೈತರೊಂದಿಗೆ ಕುಳಿತು ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ.
ಧಾರವಾಡದ ಯರಿಕೊಪ್ಪ ಬಳಿ ರೈತರು ರಾಜ್ಯ ರೈತ ಸಂಘ ಮತ್ತು ಹಸೀರು ಸೇನಾ ಸಂಘಟನೆ ಕರೆಗೆ ಬೆಂಬಲ ಸೂಚಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಂಎಸ್ಪಿ, ಎಫ್ಆರ್ಪಿ ಸೇರಿ ವಿವಿಧ ಬೇಡಿಕೆಗಳ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಕಬ್ಬು ಬೆಳೆಗಾರರ ಈ ಧರಣಿಗೆ ಇದೀಗ ಶಿರಹಟ್ಟಿಯ ಫಕ್ಕೀರ ದಿಂಗಾಲೇಶ್ವರ ಶ್ರೀಗಳು ಸಹ ಸಾಥ್ ನೀಡಿದ್ದಾರೆ. ಧಾರವಾಡದ ಯರಿಕೊಪ್ಪ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ನಡೆಯುತ್ತಿರುವ ಧರಣಿಯಲ್ಲಿ ದಿಂಗಾಲೇಶ್ವರ ಶ್ರೀಗಳು ರೈತರೊಂದಿಗೆ ಬಿಸಿಲಿನಲ್ಲೇ ಕುಳಿತು ಪ್ರತಿಭಟನೆ ನಡೆಸಿದರು ಆಕ್ರೋಶ ವ್ಯಕ್ತಪಡಿಸಿದರು.
