Dharwad

ಧಾರವಾಡದ ಹೊನ್ನಾಪುರದಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ಕಿಡಿಯಿಂದ ಕಬ್ಬು ಬೆಳೆಗೆ ಬೆಂಕಿ…

Share

ವಿದ್ಯುತ್ ಟ್ರಾನ್ಸಫರ್ಮರ್ ಕಿಡಿ ಬಿದ್ದು ಕಬ್ಬು ಬೆಳೆ ಬೆಂಕಿಗೆ ಆಹುತಿಯಾದ ಘಟನೆ ಅಳ್ನಾವಾರ ತಾಲೂಕಿನ ಹೊನ್ನಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.‌

ಧಾರವಾಡ ಜಿಲ್ಲೆಯ ಅಳ್ನಾವಾರ ತಾಲ್ಲೂಕಿನ ಹೊನ್ನಾಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಕಬ್ಬು ಬೆಳೆದ ರೈತ ಕಂಗಾಲಾಗಿದ್ದಾನೆ. ನೋಡು ನೋಡುತ್ತಿದಂತೆ ಕ್ಷಣಾರ್ಧದಲ್ಲಿ ಹೊತ್ತಿ ಉರಿದ 13 ಎಕರೆ ಕಬ್ಬಿಗೆ ಹಾನಿಯಾಗಿದೆ. ಯಲ್ಲವ್ವ ನಾಯಕ್ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆಯಾಗಿದ್ದು, ಜಮೀನಿನಲ್ಲಿದ್ದ ವಿದ್ಯುತ್ ಟಿಸಿಯಿಂದ ಹಾರಿದ್ದ ಬೆಂಕಿ ಕಿಡಿ ಬಳಿಕ ಇಡೀ ಕಬ್ಬಿನ ಗದ್ದೆಗೆ ಆವರಿಸಿದ ಪರಿಣಾಮ ಕೆಲವೇ ದಿನಗಳಲ್ಲಿ ಕಟಾವಾಗೆ ಬಂದಿದ್ದ ಕಬ್ಬು ಈಗ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ರೈತರು ಹರಸಾಹಸಪಟ್ಟಾದ್ದಾರೆ. ಕಬ್ಬಿನ ಜತೆಗೆ ಜಮೀನಿನಲ್ಲಿದ್ದ ನೀರಾವರಿ ಪೈಪ್ ಸೇರಿ ಕಬ್ಬು ಸುಟ್ಟು ಭಸ್ಮವಾಗಿವೆ. ಅಳ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Tags:

error: Content is protected !!