Belagavi

ಮಣ್ಣಿಕೆರೆಯಲ್ಲಿ ಪ್ರಭುದೇವ ದೇವಸ್ಥಾನದ ಕಾಲಂ ಕಾಮಗಾರಿಗೆ ಚಾಲನೆ: ಜಾರಕೀಹೊಳಿ ಅವರ ಆಪ್ತರಿಂದ ಭೂಮಿಪೂಜೆ!

Share

ಬೆಳಗಾವಿ ತಾಲೂಕಿನ ಕಡೋಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಣ್ಣಿಕೆರಿ ಗ್ರಾಮದಲ್ಲಿ ನೂತನ ಪ್ರಭುದೇವ ದೇವಸ್ಥಾನದ ಕಾಲಂ ಕಾಮಗಾರಿಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಈ ಧಾರ್ಮಿಕ ಕಾರ್ಯಕ್ರಮ ನೆರವೇರಿತು.

ಕರ್ನಾಟಕ ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ಮಾರ್ಗದರ್ಶನ ಮತ್ತು ಆದೇಶದ ಮೇರೆಗೆ, ಸಚಿವರ ಆಪ್ತ ಸಹಾಯಕರಾದ ಹಾಗೂ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಅವರು ಬೆಳಗಾವಿ ತಾಲೂಕಿನ ಕಡೋಲಿ ಜಿ.ಪಂ. ವ್ಯಾಪ್ತಿಯ ಮಣ್ಣಿಕೆರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಭುದೇವ ದೇವಸ್ಥಾನದ ಕಾಲಂ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದರು. ಈ ಶುಭ ಸಂದರ್ಭದಲ್ಲಿ ಮಣ್ಣಿಕೆರಿ, ಕಡೋಲಿ, ಕೇದನೂರ ಮತ್ತು ಬಂಬರಗಾ ಸೇರಿದಂತೆ ಒಟ್ಟು ಐದು ಗ್ರಾಮಗಳ ದೇವಸ್ಥಾನ ಕಮಿಟಿ ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದು ದೇವರ ಕೃಪೆಗೆ ಪಾತ್ರರಾದರು.

Tags:

error: Content is protected !!