State

ಫಾರ್ಮ್-7 ಸಲ್ಲಿಸಿದ್ರೆ ಮತದಾರರನ್ನು ತಕ್ಷಣ ಕೈಬಿಡಲ್ಲ: ಚುನಾವಣಾಧಿಕಾರಿ ವಿ.ಅನ್ಬುಕುಮಾರ್

Share

ರಾಜ್ಯ ರಾಜಕಾರಣದಲ್ಲಿ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪ ಬಿರುಗಾಳಿ ಎಬ್ಬಿಸಿದೆ. ಬಲ್ಕ್ ಆಗಿ ಫಾರ್ಮ್ 7 ಹಂಚುವ ಮೂಲಕ ಬಿಜೆಪಿ, ಜೆಡಿಎಸ್ನವರು ವೋಟ್ ಡಿಲೀಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದರು. ಇತ್ತೀಚೆಗೆ ಸಿಎಂ ಡಿಕೆ ಶಿವಕುಮಾರ್ ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ಕೂಡ ಮಾಡಿದ್ದರು. ಕಾಂಗ್ರೆಸ್ನ ಆರೋಪಗಳಿಗೆ ಇದೀಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ‘ಒಂದು ದಿನಕ್ಕೆ 10 ಫಾರ್ಮ್ ಕೊಡಬಹುದು. ಬಿಎಲ್ಎಗಳು ಒಟ್ಟು 50 ಫಾರ್ಮ್ ಕೊಡಬಹುದು. ಇದಕ್ಕೂ ಮೀರಿ ಫಾರ್ಮ್ ಬಂದರೆ ಇಆರ್ಒ ನಿರ್ಧಾರ ಮಾಡುತ್ತಾರೆ. ಅದಕ್ಕಿಂತ ಹೆಚ್ಚು ಫಾರ್ಮ್ ಕೊಟ್ಟರೇ ಅಥವಾ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದರೆ ಕ್ರಮ ಕೈಗೊಳ್ಳಬಹುದು. ಆದರೆ ಫಾರ್ಮ್-7 ಸಂಬಂಧ ಈವರೆಗೆ ಯಾವುದೇ ಕೇಸ್ ದಾಖಲಾಗಿಲ್ಲ. ಮತದಾರರ ಪಟ್ಟಿಯಿಂದ ಕೈಬಿಡಬೇಕೆಂದರೆ ಮೊದಲಿಗೆ ನೋಟಿಸ್ ನೀಡಲಾಗುತ್ತದೆ. ಬಳಿಕ ವಿಚಾರಣೆ ನಡೆಸಿದ ನಂತರ ಪಟ್ಟಿಯಿಂದ ಕೈಬಿಡಲಾಗುವುದು’ ಎಂದರು. ಆ ಮೂಲಕ ಫಾರ್ಮ್-7 ದುರ್ಬಳಕೆ ಕುರಿತಾಗಿ ಕಾಂಗ್ರೆಸ್ ಆರೋಪದ ಬಗ್ಗೆ ಅವರು ಸ್ಪಷ್ಟನೆ ನೀಡಿದರು.
ಇನ್ನು ‘ರಾಜ್ಯಾದ್ಯಂತ ಒಟ್ಟು 43,82,313 ನೋಟಿಸ್‌ ಜಾರಿ ಆಗಿದೆ. ಈ ಪೈಕಿ 43,55,818 ನೋಟಿಸ್‌ಗಳು ವಿತರಣೆ ಆಗಿದೆ. ಇನ್ನೂ 26,495 ನೋಟಿಸ್‌ಗಳು ವಿತರಣೆ ಬಾಕಿ ಇದೆ. ವಿತರಿಸಿದ ನೋಟಿಸ್‌ ಪೈಕಿ 36,89,063 ಕೇಸ್ಗಳವಿಚಾರಣೆ ಪೂರ್ಣಗೊಂಡಿವೆ. ಆಕ್ಷೇಪಣೆ ವಿಲೇವಾರಿಗೆ ಅಕ್ಟೋಬರ್ 22ರಂದು ಕೊನೆಯ ದಿನಾಂಕ’ ಎಂದು ಅವರು ತಿಳಿಸಿದರು.

Tags:

error: Content is protected !!