ಮತ ಪರಿಷ್ಕರಣೆ ಅನ್ನೋದು ಈ ಹಿಂದೆಯು ನಡೆದಿತ್ತು, ಈಗಲೂ ನಡೆಯುತ್ತಿದೆ. ಕಾಲಕಾಲಕ್ಕೆ ಮತ ಪರಿಷ್ಕರಣೆ ಮಾಡಲಾಗುತ್ತದೆ. ಅದರಲ್ಲಿ ಈಗ ಫಾರ್ಮ್ 7 ಕೇರಳ ಬಿಹಾರ ಸೇರಿ ದೇಶದ ಎಲ್ಲ ಕಡೆ ಮಾಡಲಾಗುತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ಫರ್ಮ್ 7 ಆರೋಪಕ್ಕೆ ವಿಧಾನ ಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ತಿರುಗೇಟು ನೀಡಿದ್ದಾರೆ.


ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಸ್‌ಐಅರ್ ಇದು ಇವತ್ತು ಆರಂಭ ಮಾಡಿದ್ದಲ್ಲ. ಕಾಲಕಾಲಕ್ಕೆ ಆಯಾ ಸರ್ಕಾರ ಬಂದಾಗ ಮಾಡುತ್ತಲೇ ಬಂದಿದ್ದಾರೆ. ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅದು ಮಾಡುತ್ತಿದೆ. ಈಗ ಟೆಕ್ನಾಲಜಿ ಹೆಚ್ಚು ಅಭಿವೃದ್ಧಿ ಯಾಗಿದೆ. ಕೇರಳದಲ್ಲಿ ಆದಾಗ ಅಲ್ಲಿಯ ಸಿಎಂ ಈ ಬಗ್ಗೆ ಒಳ್ಳೆಯದು ಎಂದು ಹೊಗಳಿದ್ದಾರೆ. ಇದು ಚುನಾವಣಾ ಆಯೋಗ ಕೇಂದ್ರ ಅಧಿನದಲ್ಲಿ ಕೆಲಸ ಮಾಡಿದರು ಕೂಡಾ ರಾಜ್ಯದ ನೌಕರರು ಇದರಲ್ಲಿ ಕೆಲಸ ಮಾಡ್ತಾರೆ. ಈಗ ಫಾರ್ಮ್7 ಮುಂದಿಟ್ಟುಕೊಂಡು ದೇಶಾದ್ಯಂತ ಗೊಂದಲ ಸೃಷ್ಟಿ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕೇಂದ್ರದ ಅಂಗ ಸಂಸ್ಥೆ ಮೇಲೆ ಜನರ ಭರವಸೆ ಹೋಗಬೇಕು, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬೇಕು ಎಂದು ಟೂಲ್ ಆಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಕೇವಲ ಅಧಿಕಾರ ಹಿಡಿಯಬೇಕು ಎಂಬ ದೃಷ್ಟಿಯಿಂದ ಸಂವಿಧಾನಿಕ ಸಂಸ್ಥೆ ಬುಡ ಅಲುಗಾಡಿಸಲು ಕಾಂಗ್ರೆಸ್ ಮಾಡುತಿರುವ ಷಡ್ಯಂತರವಾಗಿದೆ. ಫಾರ್ಮ್ ೭ ಎಂದರೆ ಮನೆಗೆ ಮನೆಗೆ ಮೂಲ ಮತದಾರರ ಪಟ್ಟಿಯಲ್ಲಿ ಜೀವಂತ ಇದ್ದವರ ಬಗ್ಗೆ ಮತ್ತು ಈ ಭಾಗದ ಜನರು ಇದಾರೊ ಇಲ್ಲವೊ ಎಂದು ನೋಡುವುದಿದೆ. ಇದು ಫೈನಲ್ ಪಟ್ಟಿಯಲ್ಲಿ, ಇದು ಡ್ರಾಫ್ಟ್ ಪಟ್ಟಿ ತಯಾರಿಸಿದೆ. ಈ ಪಟ್ಟಿ ಮಾಡಲು ಎಲ್ಲ ಪಕ್ಷದ ಒಬ್ಬೊಬ್ಬರಿಗೆ ನೇಮಕ ಮಾಡಲು ಅಧಿಕೃತವಾಗಿ ಹೇಳಿದ. ಅದರ ಪ್ರಕಾರ ಇಡಿ ದೇಶದ ಪಕ್ಷಗಳು ಪ್ರತಿಯೊಂದು ಬುತಿನ ಪಟ್ಟಿ ಚುನಾವಣಾ ಆಯೋಗಕ್ಕೆ ಕೊಟ್ಟಿದೆ. ಇವತ್ತು ಪಟ್ಟಿ ಬಂದ ಮೇಲೆ ಸರ್ಕಾರದ ಗಮನಕ್ಕೆ ತರೊದೆ ಫಾರ್ಮ್ ೭. ಚುನಾವಣಾ ಆಯೋಗದವರಯ ಸರಿ ಇದ್ದರೆ ಮತದಾರರನ್ನ ಕೈಬಿಡ್ತಾರೆ. ಇಲ್ಲದೇ ಹೋದರೆ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರಲಿದೆ. ಇದನ್ನೆ ದೊಡ್ಡ ವಿಷಯ ಮಾಡಿ ಚುನಾವಣಾ ಆಯೋಗದ ಬಗ್ಗೆ ಸಂಶಯ ಬರುವಂತೆ ಮಾಡಲಾಗುತಿದೆ.
ಚುನಾವಣಾ ಆಯೋಗವೇ ಎಲ್ಲದ್ದಕ್ಕೆ ಹೊಣೆ ಎಂದು ಚಿತ್ರ ಬಿಂಬಿಸುವ ಕೆಲಸ ನಡೆದಿದೆ, ಇದೊಂದು ನಾಟಕ, ಬರಗಾಲ ಬಿದ್ದಿದೆ, ಅದರ ಬಗ್ಗೆ ಟೈಮ್ ತಗಿಬೇಕು. ರಾಜ್ಯದಲ್ಲಿ ರೈತರು ಗುಳೆ ಹೊರಟಿದ್ದಾರೆ, ತೊಂದರೆ ಇವೆ, ಅದರ ಪರಿಹಾರ ಕೊಡುವ ಕೆಲಸ ಆಗಬೇಕು. ಬೆಂಗಳೂರಿನಲ್ಲಿ ಗುಂಡಿ ಬಿದ್ದಿವೆ, ಅದರ ಬಗ್ಗೆ ವಿಚಾರ ಮಾಡಬೇಕು. ಶಾಲೆಗೆ ಕೊಟ್ಟ ಬೂಟು ಮತ್ತು ಸಾಕ್ಸ್ ಎರಡೆ ತಿಂಗಳಲ್ಲಿ ಹರಿದು ಹೋಗಿವೆ, ಅದರ ಬಗ್ಗೆ ವಿಚಾರ ಮಾಡಬೇಕಾದ ಸಿಎಂ ರಿಯಲ್ ಎಸ್ಟೇಟ್ ದಂಧೆ ಮಾಡುತಿದ್ದಾರೆ. ಒಣ ನಾಟಕ ಮಾಡೊದು ಮಾಡುತಿದ್ದಾರೆ, ಇದರಿಂದ ರಾಜ್ಯಕ್ಕೆ ಒಳ್ಳೆದಾಗಲ್ಲ, ಅವರಿಗೆ ಕೂಡಾ ಒಳ್ಳೆಯದಲ್ಲ. ಜನ ನೋಡುತಿದ್ದಾರೆ, ಆಮೇಲೆ ಏನು ನಾಟಕ ಎಂದು ಮಾತಾಡ್ತಾರೆ. ಎಸ್ಐಆರ್ ಬಗ್ಗೆ ಕೂಡಾ ಕಾಂಗ್ರೆಸ್ ಇದೇ ರೀತಿಯ ನಾಟಕ ಮಾಡುತ್ತಿದೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಈ ರೀತಿ ಮಾಡಬೇಕು ಎಂದು ಹೇಳಿದ್ದಾರೆ, ರಾಹುಲ್ ಗಾಂಧಿ ಮೆಚ್ಚಿಸಲು ಇಡಿ ದೇಶಾದ್ಯಂತ ಈ ರೀತಿ ಕೆಲಸ ನಡೆದಿದೆ.
ಸಿಎಂ ಆದವರು ಸಂವಿಧಾನದ ಹುದ್ದೆಯಲ್ಲಿ ಇದ್ದವರು, ಯಾವುದೇ ಹೋರಾಟ ಮಾಡಲು ಅನುಮತಿ ಪಡೆಯಬೇಕು. ಅವರು ಯಾವುದೇ ಅನುಮತಿ ಪಡೆಯದೇ ತಮ್ಮ ಕ್ಯಾಬಿನೆಟ್ ತೆಗೆದುಕೊಂಡು ಹೋಗಿ ಹೋರಾಟ ಮಾಡ್ತಾರೆ. ಚುನಾವಣಾ ಆಯೋಗ ಮುಖ್ಯಸ್ಥ ಹಿಡಿದುಕೊಂಡು ಉಳಿದವರು ರಾಜ್ಯ ಸರ್ಕಾರದ ಅಧಿಕಾರಿಗಳೇ, ತಾವೇ ಮಾಡುವಂತೆ ಎಸ್ಐಆರ್ ಪ್ರಕ್ರಿಯೆ ವಿರುದ್ಧ ತಾವೆ ಹೋರಾಟ ಮಾಡುತಿದ್ದಾರೆ ಎಂದರೆ ಇದಕ್ಕಿಂತ ದೊಡ್ಡ ಹಾಸ್ಯಾಸ್ಪದ ಯಾವುದು ಇಲ್ಲಾ ಎಂದು ವಾಗ್ದಾಳಿ ನಡೆಸಿದರು.
